ಪೊಲೀಸರು ಕೈ ಹಿಡಿದರೂ ನಿಲ್ಲದ ಮಂಗಳೂರು ತಾ.ಪಂ. ಅಧ್ಯಕ್ಷರ ವಾಹನ ಸೀಝ್ ಮಾಡಿದ ಬಣಕಲ್ ಪೊಲೀಸ್ - Karavali Times ಪೊಲೀಸರು ಕೈ ಹಿಡಿದರೂ ನಿಲ್ಲದ ಮಂಗಳೂರು ತಾ.ಪಂ. ಅಧ್ಯಕ್ಷರ ವಾಹನ ಸೀಝ್ ಮಾಡಿದ ಬಣಕಲ್ ಪೊಲೀಸ್ - Karavali Times

728x90

17 April 2020

ಪೊಲೀಸರು ಕೈ ಹಿಡಿದರೂ ನಿಲ್ಲದ ಮಂಗಳೂರು ತಾ.ಪಂ. ಅಧ್ಯಕ್ಷರ ವಾಹನ ಸೀಝ್ ಮಾಡಿದ ಬಣಕಲ್ ಪೊಲೀಸ್ಚಿಕ್ಕಮಗಳೂರು (ಕರಾವಳಿ ಟೈಮ್ಸ್) : ಮೂಡಗೆರೆ ತಾಲೂಕಿನ ಬಣಕಲ್ ಎಂಬಲ್ಲಿ ಪೊಲೀಸರು ಕೈ ಹಿಡಿದು ನಿಲ್ಲಿಸಲು ಸೂಚಿಸಿದರೂ, ಸೂಚನೆ ಧಿಕ್ಕರಿಸಿ ಚಲಾಯಿಸಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರ ವಾಹನವನ್ನು ಬಣಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಕೊರೊನಾ ವೈರಸ್ ಆತಂಕದಲ್ಲಿ ಮಂಗಳೂರು ರೆಡ್ ಝೋನ್‍ನಲ್ಲಿದೆ. ಮಂಗಳೂರಿನಿಂದ ಚಾರ್ಮಾಡಿ ಮೂಲಕ ಚಿಕ್ಕಮಗಳೂರಿಗೆ ಬರುವ ಪ್ರತಿಯೊಂದು ಗಾಡಿಯನ್ನು ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ತೊಳೆದುಕೊಂಡು ಬರುವಂತೆ ಹೇಳಿ, ಚೆಕ್ ಮಾಡಿ ಜಿಲ್ಲೆಯೊಳಗೆ ಬರುವಂತೆ ಸೂಚಿಸಿದ್ದಾರೆ.

ಮಂಗಳೂರಿನಿಂದ ಎರಡು ದಿನಗಳ ಹಿಂದೆ ತಾಲೂಕು ಪಂಚಾಯತ್ ಅಧ್ಯಕ್ಷರ ಗಾಡಿ ಕೊಟ್ಟಿಗೆಹಾರದಲ್ಲಿ ಪೊಲೀಸರು ಅಡ್ಡ ಹಾಕಿದರೂ ನಿಲ್ಲಿಸದೆ ಬಣಕಲ್ ಬಂದಿದ್ದರು. ಅಲ್ಲಿಂದ ಮತ್ತೆ ವಾಪಾಸು ತೆರಳುವಾಗಲೂ ವಾಹನ ನಿಲ್ಲಿಸದೆ ಹೋಗಿದ್ದರು. ವಾಹನದಲ್ಲಿ ಚಾಲಕ ಸೇರಿ ನಾಲ್ಕೈದು ಜನ ಇದ್ದರೆಂದು ಹೇಳಲಾಗಿದೆ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗಡಿಗಳು ಬಂದ್ ಮಾಡಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಎಸ್‍ಪಿ ಹಾಗೂ ಡಿಸಿ ಅನುಮತಿ ಬೇಕು. ಆದರೆ ಅನುಮತಿ ಇದ್ಯೋ-ಇಲ್ಲವೋ ಎರಡನೇ ಮಾತು. ಪೊಲೀಸರು ಕೈ ಹಿಡಿದರೂ ವಾಹನ ನಿಲ್ಲಿಸಿಲ್ಲ. ವಾಹನದ ಮುಂಭಾಗದಲ್ಲಿ ಅಧ್ಯಕ್ಷರು ತಾಲೂಕು ಪಂಚಾಯತ್ ಎಂಬ ಬೋರ್ಡ್ ಇತ್ತು. ಸರಕಾರಿ ವಾಹನವನ್ನು ದುರುಪಯೋಗಿಸಿಕೊಂಡು ತಾ ಪಂ ಅಧ್ಯಕ್ಷರು ಜನರನ್ನು ಕರೆದುಕೊಂಡು ಹೋಗಲು ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರದ ನಿಯಮವನ್ನು ಉಲ್ಲಂಘಿಸಿದ ಆರೋಪದಡಿ ಬಣಕಲ್ ಪೊಲೀಸರು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರ ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸರು ಕೈ ಹಿಡಿದರೂ ನಿಲ್ಲದ ಮಂಗಳೂರು ತಾ.ಪಂ. ಅಧ್ಯಕ್ಷರ ವಾಹನ ಸೀಝ್ ಮಾಡಿದ ಬಣಕಲ್ ಪೊಲೀಸ್ Rating: 5 Reviewed By: karavali Times
Scroll to Top