ಹಿಂದಿನ ತಪ್ಪುಗಳಿಂದ ಕಲಿಯಿರಿ, ಲಾಕ್‍ಡೌನ್ ನಂತರ ಜನರ ಜೀವನಕ್ಕೆ ಯೋಜನೆ ರೂಪಿಸಿ : ರಘುರಾಮ್ ರಾಜನ್ ಸಲಹೆ - Karavali Times ಹಿಂದಿನ ತಪ್ಪುಗಳಿಂದ ಕಲಿಯಿರಿ, ಲಾಕ್‍ಡೌನ್ ನಂತರ ಜನರ ಜೀವನಕ್ಕೆ ಯೋಜನೆ ರೂಪಿಸಿ : ರಘುರಾಮ್ ರಾಜನ್ ಸಲಹೆ - Karavali Times

728x90

6 April 2020

ಹಿಂದಿನ ತಪ್ಪುಗಳಿಂದ ಕಲಿಯಿರಿ, ಲಾಕ್‍ಡೌನ್ ನಂತರ ಜನರ ಜೀವನಕ್ಕೆ ಯೋಜನೆ ರೂಪಿಸಿ : ರಘುರಾಮ್ ರಾಜನ್ ಸಲಹೆನವದೆಹಲಿ (ಕರಾವಳಿ ಟೈಮ್ಸ್) : ಏಪ್ರಿಲ್ 14ಕ್ಕೆ ಲಾಕ್‍ಡೌನ್ ಕೊನೆಯಾಗಿ ಜೀವನ ಎಂದಿನಂತೆ ಸಾಗುತ್ತದೆ ಎಂದು ಸಾಮಾನ್ಯ ಜನತೆ ಅಂದುಕೊಂಡರೆ ಅದು ತಪ್ಪು. ದೇಶದಲ್ಲಿ ಹಲವು ನಾಗರಿಕರಿಗೆ ಮುಂದೆ ಜೀವನದ ಪರಿಸ್ಥಿತಿ ಇದೇ ರೀತಿ ಇರಲಿಕ್ಕಿಲ್ಲ ಎಂದು ಆರ್.ಬಿ.ಐ. ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕು ವಿರುದ್ಧ ಭಾರತ ಗೆದ್ದರೆ ಆಯಿತು ಎಂದರೆ ಅದು ಹೇಳಿದಷ್ಟು ಸುಲಭದ ಮಾತಲ್ಲ. ಇಷ್ಟು ದಿನಗಳ ಲಾಕ್‍ಡೌನ್‍ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಷ್ಟವಿದೆ, ಸಾಕಷ್ಟು ಸಮಯವೇ ಬೇಕಾಗಬಹುದು ಎಂದವರು ಹೇಳಿದ್ದಾರೆ.

ಲಾಕ್‍ಡೌನ್ ಮುಗಿದ ನಂತರ ಸರ್ಕಾರ ಆರ್ಥಿಕ ಚೇತರಿಕೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಸಾಮಾನ್ಯ ಜನತೆ ಪರಿಸ್ಥಿತಿ ಕಷ್ಟವಾಗಬಹುದು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

2008-09ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಹದಗೆಟ್ಟಿತ್ತು. ಆದರೆ ಅಂದು ಲಾಕ್‍ಡೌನ್ ಆಗಿರಲಿಲ್ಲ. ಆರ್ಥಿಕ ಚಟುವಟಿಕೆಗಳು, ವ್ಯವಹಾರಗಳು, ಜನಜೀವನ ಎಂದಿನಂತೆ ಅಂದು ಸಾಗಿತ್ತು. ಅಂದು ಸರ್ಕಾರದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಇಂದು ಕೊರೋನಾ ವೈರಸ್ ಸೋಂಕಿನಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ತತ್ತರಿಸಿ ಹೋಗಿವೆ. ವಾರಗಟ್ಟಲೆ ಚಟುವಟಿಕೆಗಳು, ವ್ಯವಹಾರಗಳು ಸ್ಥಗಿತಗೊಂಡಿವೆ ಎಂದು ರಘುರಾಮ್ ರಾಜನ್ ತಮ್ಮ ಬ್ಲಾಗ್‍ನಲ್ಲಿ ಹೇಳಿಕೊಂಡಿದ್ದಾರೆ.

ಲಾಕ್‍ಡೌನ್ ನಂತರ ಮುಂದೇನು ಎಂಬ ಬಗ್ಗೆ ಸರ್ಕಾರ ಯೋಜನೆ ಹಾಕಿಕೊಳ್ಳಬೇಕಾಗಿತ್ತು. ಲಾಕ್‍ಡೌನ್ ಮುಗಿದ ನಂತರ ಕೂಡ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಕೋಟಿಗಟ್ಟಲೆ ಜನರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಹೇಳಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಹಿಂದಿನ ತಪ್ಪುಗಳಿಂದ ಕಲಿಯಿರಿ, ಲಾಕ್‍ಡೌನ್ ನಂತರ ಜನರ ಜೀವನಕ್ಕೆ ಯೋಜನೆ ರೂಪಿಸಿ : ರಘುರಾಮ್ ರಾಜನ್ ಸಲಹೆ Rating: 5 Reviewed By: karavali Times
Scroll to Top