ಅಬ್ಬರಿಸಲಿದೆ ಮಳೆ, ರಾಜ್ಯದ 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಜಾರಿ - Karavali Times ಅಬ್ಬರಿಸಲಿದೆ ಮಳೆ, ರಾಜ್ಯದ 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಜಾರಿ - Karavali Times

728x90

6 April 2020

ಅಬ್ಬರಿಸಲಿದೆ ಮಳೆ, ರಾಜ್ಯದ 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಜಾರಿಬೆಂಗಳೂರು (ಕರಾವಳಿ ಟೈಮ್ಸ್) : ರಣ ಬಿಸಿಲಿನ ತಾಪದಿಂದ ಬಸವಳಿದಿದ್ದ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾನುವಾರ ಗುಡುಗು, ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಮುಂದಿನ ಮಂಗಳವಾರದಿಂದ ರಾಜ್ಯದಲ್ಲಿ ಅನೇಕ ಕಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಾಲೇ ರಾಜ್ಯದ 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಇದೇ ಏಪ್ರಿಲ್ 7 ಹಾಗೂ 8 ರಂದು ರಾಜ್ಯದ ವಿವಿಧೆಡೆ ಮಳೆಯಾಗಲಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ದಾವಣಗೆರೆ, ಹಾಸನ, ಕೊಡಗು ಹಾಗೂ ಮೈಸೂರುಗಳಲ್ಲಿ ಭಾರೀ ಮಳೆ ಆಗುವ ಸೂಚನೆ ಇದೆ ಎಂದು ಇಲಾಖೆ ವರದಿ ಹೇಳಿದೆ.

ಭಾನುವಾರ ತುಮಕೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದ್ದು ಬೆಂಗಳೂರಿನ ನೆಲಮಂಗಲದಲ್ಲಿಯೂ ಮಳೆಯ ಆರ್ಭಟವಿತ್ತು ಎಂದು ವರದಿಯಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಅಬ್ಬರಿಸಲಿದೆ ಮಳೆ, ರಾಜ್ಯದ 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಜಾರಿ Rating: 5 Reviewed By: karavali Times
Scroll to Top