ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬೋಗೋಡಿ ವಾರ್ಡ್ ಸಂಖ್ಯೆ 24 ರ ಪರಿಸರದ ಕಳೆದ ಕೆಲ ದಿನಗಳಿಂದ ಕೆಟ್ಟು ಹೋಗಿದ್ದ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ನೇತೃತ್ವದಲ್ಲಿ ಗುರುವಾರ ದುರಸ್ತಿ ಪಡಿಸಿ ಪರಿಸರವಾಸಿಗಳಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ನೀರಿನ ಸಮಸ್ಯೆಯಿಂದ ಸಮಸ್ಯೆ ಅನುಭವಿಸಿದ್ದ ಸ್ಥಳೀಯ ನಿವಾಸಿಗಳು ಸ್ಥಳೀಯ ಜನಪ್ರತಿನಿಧಿ ಅಬೂಬಕರ್ ಸಿದ್ದೀಕ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಿದ್ದೀಕ್ ಅವರು ಪುರಸಭಾಧಿಕಾರಿಗಳನ್ನು ಸಂಪರ್ಕಿಸಿ ಕುಡಿಯುವ ನೀರಿನ ವ್ಯವಸ್ಥೆಗೆ ಕಾಯಕಲ್ಪ ಒದಗಿಸಿದ್ದಾರೆ.
ಕಾಮಗಾರಿ ಸಂದರ್ಭ ಸ್ಥಳದಲ್ಲಿ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡು, ಸ್ಥಳೀಯರಾದ ಶಿಹಾಬ್ ಬೋಗೋಡಿ, ಇಲ್ಯಾಸ್ ಬೋಗೋಡಿ, ಅಕ್ಬರ್ ರಿಕ್ಷಾ, ಕೈಫ್ ಬೋಗೋಡಿ, ಸವಾದ್ ಬೋಗೋಡಿ, ಗಫೂರ್ ಬೋಗೋಡಿ, ತನ್ವೀರ್ ಬೋಗೋಡಿ, ಇಬ್ರಾಹಿಂ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment