ಡಿ.ಎಲ್.-ಎಲ್.ಎಲ್.ಆರ್. ಪರೀಕ್ಷೆ : ಹಸಿರು ವಲಯಗಳಲ್ಲಿ ಮೇ 7 ರಿಂದ ಆರಂಭ - Karavali Times ಡಿ.ಎಲ್.-ಎಲ್.ಎಲ್.ಆರ್. ಪರೀಕ್ಷೆ : ಹಸಿರು ವಲಯಗಳಲ್ಲಿ ಮೇ 7 ರಿಂದ ಆರಂಭ - Karavali Times

728x90

5 May 2020

ಡಿ.ಎಲ್.-ಎಲ್.ಎಲ್.ಆರ್. ಪರೀಕ್ಷೆ : ಹಸಿರು ವಲಯಗಳಲ್ಲಿ ಮೇ 7 ರಿಂದ ಆರಂಭಬೆಂಗಳೂರು (ಕರಾವಳಿ ಟೈಮ್ಸ್) : ಡಿ.ಎಲ್. (ಚಾಲನಾ ಪರವಾನಗಿ) ಹಾಗೂ ಎಲ್.ಎಲ್.ಆರ್. (ಕಲಿಕಾ ಚಾಲನಾ ಪರವಾನಿಗೆ) ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಮಂದಿಗೆ ಮೇ 7ರಿಂದ ಹಸಿರು ವಲಯಗಳಲ್ಲಿ ಈ ಪರೀಕ್ಷೆಗಳು ಆರಂಭವಾಗಲಿದೆ.
    ಡಿ.ಎಲ್/ ಎಲ್.ಎಲ್.ಆರ್. ಲೈಸೆನ್ಸ್‍ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ. ಪ್ರತಿದಿನ ಶೇ. 50 ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕವನ್ನು ಆರ್‍ಟಿಒ ಅಭ್ಯರ್ಥಿಗಳ ಮೊಬೈಲ್‍ಗೆ ಸಂದೇಶ ಕಳುಹಿಸಲಿದೆ.

    ಹಸಿರು ವಲಯದಲ್ಲಿರುವ 14 ಜಿಲ್ಲೆಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, ಉಳಿದ ಕಿತ್ತಳೆ ಮತ್ತು ಕೆಂಪು ವಲಯದಲ್ಲಿ ಲೈಸೆನ್ಸ್ ಹೊರತು ಪಡಿಸಿ ವಾಹನ್-4 ತಂತ್ರಾಶದ ಅಡಿಯಲ್ಲಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ ಅರ್ಹತಾ ಪತ್ರ ನವೀಕರಣ ಇತ್ಯಾದಿ ಸೇವೆಗಳು ಲಭ್ಯವಾಗಲಿದೆ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಆದೇಶ ಪ್ರಕಟಿಸಿದ್ದಾರೆ.

    ಕಚೇರಿಗೆ ಹಾಜರಾಗುವ ಸಂದರ್ಭದಲ್ಲಿ ಕೋವಿಡ್-19 ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕಾಗುತ್ತದೆ.
  • Blogger Comments
  • Facebook Comments

0 comments:

Post a Comment

Item Reviewed: ಡಿ.ಎಲ್.-ಎಲ್.ಎಲ್.ಆರ್. ಪರೀಕ್ಷೆ : ಹಸಿರು ವಲಯಗಳಲ್ಲಿ ಮೇ 7 ರಿಂದ ಆರಂಭ Rating: 5 Reviewed By: karavali Times
Scroll to Top