ಕೆಪಿಸಿಸಿ ಜಾಲತಾಣ ಸಮಿತಿಗೆ ದ.ಕ ಜಿಲ್ಲೆಯ ಇಬ್ಬರು ಆಯ್ಕೆ - Karavali Times ಕೆಪಿಸಿಸಿ ಜಾಲತಾಣ ಸಮಿತಿಗೆ ದ.ಕ ಜಿಲ್ಲೆಯ ಇಬ್ಬರು ಆಯ್ಕೆ - Karavali Times

728x90

7 May 2020

ಕೆಪಿಸಿಸಿ ಜಾಲತಾಣ ಸಮಿತಿಗೆ ದ.ಕ ಜಿಲ್ಲೆಯ ಇಬ್ಬರು ಆಯ್ಕೆ
ಮಂಗಳೂರು (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಸಾಮಾಜಿಕ ಜಾಲತಾಣ ಕೋ ಆರ್ಡಿನೇಷನ್ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ನಿಯೋಜಿತರಾಗಿದ್ದಾರೆ.

    ಸಮಿತಿಗೆ ಹೆಚ್ಚುವರಿಯಾಗಿ ಒಂಬತ್ತು ಸದಸ್ಯರನ್ನು ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದು, ಇದರಲ್ಲಿ ದ.ಕ. ಜಿಲ್ಲೆಯಿಂದ ಲಾವಣ್ಯಾ ಬಲ್ಲಾಳ್ ಮತ್ತು ಶೇರಿಲ್ ಅಯೋನ ಅವರನ್ನು ಆರಿಸಲಾಗಿದೆ. ಲಾವಣ್ಯಾ ಬಲ್ಲಾಳ್ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದು, ಹಲವಾರು ವರ್ಷಗಳಿಂದ ಮಹಿಳಾ ಕಾಂಗ್ರೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ. ಶಿರಿಲ್ ಅಯೋನ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದು, ರಾಜ್ಯಮಟ್ಟದ ಮಹಿಳಾ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾಗಿಯು ಕರ್ತವ್ಯ ನಿರ್ವಹಿಸಿದ ಅನುಭವವಿಯಾಗಿದ್ದಾರೆ.

ಅಭಿನಂದನೆ 

 


ಇಬ್ಬರ ಕಾರ್ಯಕ್ಷಮತೆಯನ್ನು ಗುರುತಿಸಿ ಕೆಪಿಸಿಸಿ ಅಧ್ಯಕ್ಷರು ಸೂಕ್ತ ಸ್ಥಾನ ಕಲ್ಪಿಸಿರುವುದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹೆಮ್ಮಯ ವಿಷಯಾಗಿದೆ ಎಂದು ಪುದು ಗ್ರಾ.ಪಂ. ಸದಸ್ಯ, ಮಂಗಳೂರು ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೆಪಿಸಿಸಿ ಜಾಲತಾಣ ಸಮಿತಿಗೆ ದ.ಕ ಜಿಲ್ಲೆಯ ಇಬ್ಬರು ಆಯ್ಕೆ Rating: 5 Reviewed By: karavali Times
Scroll to Top