ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ : ತಕ್ಷಣ ದಡಕ್ಕೆ ಬರುವಂತೆ ಮೀನುಗಾರರಿಗೆ ಸೂಚನೆ - Karavali Times ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ : ತಕ್ಷಣ ದಡಕ್ಕೆ ಬರುವಂತೆ ಮೀನುಗಾರರಿಗೆ ಸೂಚನೆ - Karavali Times

728x90

31 May 2020

ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ : ತಕ್ಷಣ ದಡಕ್ಕೆ ಬರುವಂತೆ ಮೀನುಗಾರರಿಗೆ ಸೂಚನೆನವದೆಹಲಿ (ಕರಾವಳಿ ಟೈಮ್ಸ್) : ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಭಾನುವಾರ ಮತ್ತು ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗ ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಫಾಕ್ಸ್ ಸಂದೇಶ ಕಳುಹಿಸಿ ಕರಾವಳಿ ಭಾಗದಲ್ಲಿ ಎಚ್ಚರದಲ್ಲಿರುವಂತೆ ಸೂಚಿಸಿದೆ.

ಲಕ್ಷದ್ವೀಪ, ಕರ್ನಾಟಕ, ಕೇರಳದಲ್ಲಿ ಮೇ 31 ಮತ್ತು 1 ರಂದು ಭಾರೀ ಮಳೆಯಾದರೆ, ಮಹಾರಾಷ್ಟ್ರದಲ್ಲಿ ಜೂನ್ 2 ರಿಂದ 4 ರವರೆಗೆ ಮಳೆಯಾಗಲಿದೆ. ಗುಜರಾತಿನಲ್ಲಿ ಜೂನ್ 3 ರಿಂದ 5ರವರೆಗೆ ಮಳೆಯಾಗಲಿದೆ ಎಂದು ಹೇಳಿದೆ.

ಜೂನ್ 2 ರ ವೇಳೆಗೆ ಕರ್ನಾಟಕದಲ್ಲಿ 90-100 ಕಿ ಮೀ ವೇಗದಲ್ಲಿ ಗಾಳಿ ಬೀಸಬಹುದು. ಮೀನುಗಾರರು ಸಮದ್ರಕ್ಕೆ ಇಳಿಯಬಾರದು. ಮೀನುಗಾರಿಕೆಗೆ ತೆರಳಿದ ಮೀನುಗಾರು ತಕ್ಷಣ ಮರಳಿ ದಡ ಸೇರಬೇಕು ಎಂದು ಸೂಚಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ : ತಕ್ಷಣ ದಡಕ್ಕೆ ಬರುವಂತೆ ಮೀನುಗಾರರಿಗೆ ಸೂಚನೆ Rating: 5 Reviewed By: karavali Times
Scroll to Top