ಸರಕಾರದ ನೆರವು ಎಲ್ಲಾ ಕಾರ್ಮಿಕರಿಗೂ ತಲುಪಿದ ಬಗ್ಗೆ ಸರಕಾರ ಖಚಿತಪಡಿಸಿಕೊಳ್ಳಬೇಕು : ಮಾಜಿ ಸಚಿವ ರಮಾನಾಥ ರೈ - Karavali Times ಸರಕಾರದ ನೆರವು ಎಲ್ಲಾ ಕಾರ್ಮಿಕರಿಗೂ ತಲುಪಿದ ಬಗ್ಗೆ ಸರಕಾರ ಖಚಿತಪಡಿಸಿಕೊಳ್ಳಬೇಕು : ಮಾಜಿ ಸಚಿವ ರಮಾನಾಥ ರೈ - Karavali Times

728x90

8 May 2020

ಸರಕಾರದ ನೆರವು ಎಲ್ಲಾ ಕಾರ್ಮಿಕರಿಗೂ ತಲುಪಿದ ಬಗ್ಗೆ ಸರಕಾರ ಖಚಿತಪಡಿಸಿಕೊಳ್ಳಬೇಕು : ಮಾಜಿ ಸಚಿವ ರಮಾನಾಥ ರೈಬಂಟ್ವಾಳ (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಕಾರ್ಮಿಕರ ಪರವಾಗಿ ಘೋಷಿಸಿದ ನೆರವು ಎಲ್ಲ ಕಾರ್ಮಿಕರನ್ನೂ ತಲುಪುವ ಬಗ್ಗೆ ಸರಕಾರ ಖಚಿತಪಡಿಸಿಕೊಳ್ಳಬೇಕು. ಸರಕಾರದ ನೆರವು ಪ್ರತೀ ಕಾರ್ಮಿಕರಿಗೆ ತಲುಪಿದಾಗ ಮಾತ್ರ ಸರಕಾರದ ಉದ್ದೇಶ ಈಡೇರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಕಾರ್ಯಪ್ರವೃತ್ತವಾಗಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಸಲಹೆ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಸರಕಾರದ ನೆರವು ಪ್ರತಿ ಕಾರ್ಮಿಕರಿಗೆ ತಲುಪದಿದ್ದರೆ ಘೋಷಣೆಗಷ್ಟೇ ಸೀಮಿತವಾದೀತು. ನಿಬಂಧನೆಗಳನ್ನು ಸಡಿಲಿಸಿ, ಪ್ರತಿಯೊಬ್ಬ ಕಾರ್ಮಿಕರಿಗೂ ತಲುಪುವ ಕೆಲಸವಾಗಬೇಕು ಎಂದಿದ್ದಾರೆ.

ಸರಕಾರದ ನೆರವಿನಲ್ಲಿ ಹಲವು ಷರತ್ತುಗಳು ಇರುವ ಕಾರಣ, ಹಲವಾರು ಕಾರ್ಮಿಕರು ನೆರವಿನಿಂದ ವಂಚಿತರಾಗುವ ಸಾಧ್ಯತೆ ಇದೆ. ಪ್ರತಿಯೊಬ್ಬ ಕಾರ್ಮಿಕನ ಪರವಾಗಿಯೂ ಸರಕಾರ ನಿಲ್ಲಬೇಕು, ಇವರ ಕುರಿತು ಸ್ಪಷ್ಟ ನೀತಿ ಅನುಸರಿಸಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿಯೇ ಇರುವ ಕೋಟ್ಯಂತರ ರೂಪಾಯಿ ನಿಧಿಯನ್ನು ಅವರಿಗಾಗಿಯೇ ಬಳಸಲು ಇದು ಸಕಾಲ. ಸಂಘಟಿತರಾಗಿರುವ ಕಾರ್ಮಿಕರೂ ಇಂದು ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ವೇಳೆಯಲ್ಲಿ ಅವರ ಪಿಎಫ್, ಇಎಸ್‍ಐಯನ್ನು ಬಳಸಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಕಾನೂನು ತೊಡಕಿದ್ದರೆ ಅವುಗಳನ್ನು ನಿವಾರಿಸಬೇಕು. ಇಂಥ ವಿಷಯಗಳಲ್ಲಿ ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ರಮಾನಾಥ ರೈ ಹೇಳಿದ್ದಾರೆ.

ಹೊರರಾಜ್ಯದಲ್ಲಿರುವ ಜನರಿಗೆ ನೆರವಾಗುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು. ಅವರನ್ನು ಅಲ್ಲಿಂದ ತಪಾಸಣೆಗೊಳಪಡಿಸಿ, ಬಸ್ಸಿನಲ್ಲಿ ಬಂದಿಳಿದ ಬಳಿಕ ಅವರ ತಪಾಸಣೆ ನಡೆಸಿ ಕ್ವಾರಂಟೈನ್ ಮಾಡುವ ಕಾರ್ಯವನ್ನೂ ಮಾಡಬಹುದು. ಅಧಿಕೃತವಾಗಿಯೇ ಅವರನ್ನು ನಿಯಮಾವಳಿ ಪಾಲಿಸಿ ಊರಿಗೆ ಕರೆತರುವ ವ್ಯವಸ್ಥೆಯನ್ನು ಕಲ್ಪಿಸಬಹುದು ಎಂದು ಮಾಜಿ ಸಚಿವ ರಮಾನಾಥ ರೈ ಸಲಹೆ ನೀಡಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಸರಕಾರದ ನೆರವು ಎಲ್ಲಾ ಕಾರ್ಮಿಕರಿಗೂ ತಲುಪಿದ ಬಗ್ಗೆ ಸರಕಾರ ಖಚಿತಪಡಿಸಿಕೊಳ್ಳಬೇಕು : ಮಾಜಿ ಸಚಿವ ರಮಾನಾಥ ರೈ Rating: 5 Reviewed By: karavali Times
Scroll to Top