ಸುನಿಲ್ ವಲ್ಯಾಪುರ, ಎಂಟಿಬಿ ನಾಗರಾಜ್, ಆರ್. ಶಂಕರ್, ಪ್ರತಾಪ ಸಿಂಹ‌ನಾಯಕ್ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್ - Karavali Times ಸುನಿಲ್ ವಲ್ಯಾಪುರ, ಎಂಟಿಬಿ ನಾಗರಾಜ್, ಆರ್. ಶಂಕರ್, ಪ್ರತಾಪ ಸಿಂಹ‌ನಾಯಕ್ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್ - Karavali Times

728x90

17 June 2020

ಸುನಿಲ್ ವಲ್ಯಾಪುರ, ಎಂಟಿಬಿ ನಾಗರಾಜ್, ಆರ್. ಶಂಕರ್, ಪ್ರತಾಪ ಸಿಂಹ‌ನಾಯಕ್ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್ಈ ಬಾರಿಯು ಎಚ್ ವಿಶ್ವನಾಥ್ ಪ್ರಯತ್ನ ವಿಫಲ, ಮಾತು ಉಳಿಸಿಕೊಂಡ ಬಿ.ಎಸ್.ವೈ.


ಬೆಂಗಳೂರು (ಕರಾವಳಿ ಟೈಮ್ಸ್) : ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬುಧವಾರ ರಾತ್ರಿ ಬಿಡುಗಡೆಯಾಗಿದೆ.

 ಕಳೆದ ವರ್ಷ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಹೊರ ಬಂದು ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ಮೂವರು ಶಾಸಕರ ಪೈಕಿ ಇಬ್ಬರಿಗೆ ಟಿಕೆಟ್ ನೀಡಲಾಗಿದ್ದು, ಎಚ್ ವಿಶ್ವನಾಥ್ ಅವರ ಪ್ರಯತ್ನ ಈ ಬಾರಿಯೂ ವಿಫಲಗೊಂಡಿದೆ.

ರಾಜ್ಯ ಬಿಜೆಪಿ ಕೋರ್‌ ಕಮಿಟಿ ವಿಧಾನ ಪರಿಷತ್ ಚುನಾವಣೆಗೆ ಹತ್ತು ಸಂಭಾವ್ಯರ ಹೆಸರನ್ನು ಸೋಮವಾರ ರಾತ್ರಿಯೇ ಹೈ ಕಮಾಂಡಿಗೆ ಕಳುಹಿಸಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಇಂದು ರಾತ್ರಿ ಪಟ್ಟಿ ಬಿಡುಗಡೆ ಮಾಡಿದೆ. ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಂಟಿಬಿ ನಾಗರಾಜ್, ಕ್ಷೇತ್ರ ಬಿಟ್ಟುಕೊಟ್ಟಿದ್ದ ಆರ್ ಶಂಕರ್ ಹಾಗೂ ಸುನೀಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.

ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನವಾಗಿದ್ದು, ಹೀಗಾಗಿ ಇಂದು ತಡರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಚಿಂಚೋಳಿ ಉಪ ಚುನಾವಣೆ ವೇಳೆ ಅವಿನಾಶ್ ಜಾಧವ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರಿಗೆ ಪರಿಷತ್ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಈಗ ಮಾತು ಉಳಿಸಿಕೊಳ್ಳುವಲ್ಲಿ ಬಿ.ಎಸ್.ವೈ ಯಶಸ್ವಿಯಾಗಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಸುನಿಲ್ ವಲ್ಯಾಪುರ, ಎಂಟಿಬಿ ನಾಗರಾಜ್, ಆರ್. ಶಂಕರ್, ಪ್ರತಾಪ ಸಿಂಹ‌ನಾಯಕ್ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್ Rating: 5 Reviewed By: karavali Times
Scroll to Top