ಕೇಂದ್ರ ಸರಕಾರದ ಸಾಧನೆ ಬಗ್ಗೆ ಬಂಟ್ವಾಳ ಬಿಜೆಪಿ ಪ್ರಮುಖರ ಸಭೆ - Karavali Times ಕೇಂದ್ರ ಸರಕಾರದ ಸಾಧನೆ ಬಗ್ಗೆ ಬಂಟ್ವಾಳ ಬಿಜೆಪಿ ಪ್ರಮುಖರ ಸಭೆ - Karavali Times

728x90

6 June 2020

ಕೇಂದ್ರ ಸರಕಾರದ ಸಾಧನೆ ಬಗ್ಗೆ ಬಂಟ್ವಾಳ ಬಿಜೆಪಿ ಪ್ರಮುಖರ ಸಭೆ
ಬಂಟ್ವಾಳ (ಕರಾವಳಿ ಟೈಮ್ಸ್) : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಪದಾಧಿಕಾರಿಗಳ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರ, ಪ್ರಧಾನ ಕಾರ್ಯದರ್ಶಿ, ಮಹಾಶಕ್ತಿ ಕೇಂದ್ರಗಳÀ ಪ್ರಮುಖರ ಸಭೆಯು ಬಂಟ್ವಾಳ ಬಿಜೆಪಿ ಕಛೇರಿಯಲ್ಲಿ ಶನಿವಾರ ನಡೆಯಿತು.

ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ 2ನೇ ಅವಧಿಯ ಪ್ರಥಮ ವರ್ಷದ ಸಾಧನೆಯ ಐತಿಹಾಸಿಕ ನಿರ್ಧಾರಗಳು ಹಾಗೂ ‘’ಜನರೇ ಪ್ರೇರಕ ನಾನು ಸೇವಕ’’ ದೇಶದ ಜನರಿಗೆ ಮೋದಿಜೀ ಬರೆದಿರುವ ಪತ್ರವನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯಕ್ರಮ ಹಾಗೂ ಪಕ್ಷದ ಸಂಘಟನ್ಮಾಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿ ಕೆ ಸುಲೋಚನಾ ಭಟ್, ಸಂದೇಶ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಕೇಂದ್ರ ಸರಕಾರದ ಸಾಧನೆ ಬಗ್ಗೆ ಬಂಟ್ವಾಳ ಬಿಜೆಪಿ ಪ್ರಮುಖರ ಸಭೆ Rating: 5 Reviewed By: karavali Times
Scroll to Top