ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟ ಬೇಡ, ಎಲ್ಲ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿ: ವಾಟಾಳ್ ನಾಗರಾಜ್ ಆಗ್ರಹ - Karavali Times ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟ ಬೇಡ, ಎಲ್ಲ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿ: ವಾಟಾಳ್ ನಾಗರಾಜ್ ಆಗ್ರಹ - Karavali Times

728x90

15 June 2020

ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟ ಬೇಡ, ಎಲ್ಲ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿ: ವಾಟಾಳ್ ನಾಗರಾಜ್ ಆಗ್ರಹ


ಪರೀಕ್ಷೆ ನಡೆಸುವುದಾದರೆ ಮಕ್ಕಳ ಜೀವ ಭದ್ರತೆಗೆ 50 ಲಕ್ಷ ಹಾಗೂ ಶಿಕ್ಷಕರ ಜೀವ ಭದ್ರತೆಗೆ 25 ಲಕ್ಷ ಮೀಸಲಿಡಿ ಹಾಸನ (ಕರಾವಳಿ ಟೈಮ್ಸ್) : ಕೋವಿಡ್-19 ಮಾರಕ ಸಾಂಕ್ರಾಮಿಕ ಸೋಂಕಿನ ಈ ಸಂದರ್ಭದಲ್ಲಿ ಪರೀಕ್ಷೆಗಿಂತ ವಿದ್ಯಾರ್ಥಿಗಳ ಜೀವ ಮುಖ್ಯವಾಗಿದೆ. ಈ ಕಾರಣಕ್ಕಾಗಿ ಯಾವುದೇ ತರಗತಿಗೂ ಪರೀಕ್ಷೆ ನಡೆಸದೇ ಪದೋನ್ನತಿ ನೀಡಬೇಕು ಎಂದು ವಾಟಾಳ್ ಪಕ್ಷದ ಸ್ಥಾಪಕ, ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಸರಕಾರವನ್ನು ಆಗ್ರಹಿಸಿದ್ದಾರೆ.

ಹಾಸನದ ಎನ್.ಆರ್. ಸರ್ಕಲ್‍ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಎಸ್ಸೆಸ್ಸೆಲ್ಸಿ, ಪಿಯುಸಿ, ಇಂಜಿನಿಯರಿಂಗ್, ಫಾರ್ಮಸಿ ಅಥವಾ ಡಿಪೆÇ್ಲಮಾ ಯಾವುದೇ ಪದವಿ ತರಗತಿಗಳಿಗೂ ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ತೆಲಂಗಾಣ, ಆಂಧ್ರ, ಹರಿಯಾಣ, ತಮಿಳುನಾಡು, ಪುದುಚೇರಿ, ದೆಹಲಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಲ್ಲರನ್ನೂ ಪಾಸ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಕೂಡಾ ಡಿಗ್ರಿ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡಲು ಕ್ರಮ ಕೈಗೊಂಡಿರುವಾಗ ಸರಕಾರ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದರು.

ದೇಶದ 12 ರಾಜ್ಯಗಳು ಪರೀಕ್ಷೆಗಳಿಲ್ಲದೆ ಪಾಸ್ ಮಾಡಿದೆ ಎಂದ ವಾಟಾಳ್ ನಾಗರಾಜ್, ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೀವ ಮುಖ್ಯವೇ ಹೊರತು ಪರೀಕ್ಷೆಯಲ್ಲ. ಕೊರೊನಾ ಸೋಂಕು ಎಂಬುದು ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ವೈರಸ್ ಹರಡಿದೆ. ಲಾಕ್‍ಡೌನ್ ಇದ್ದ ಸಮಯದಲ್ಲಿ ಕಡಿಮೆ ಇದ್ದು, ನಂತರದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ಕೊರೊನಾ ಸೋಂಕಿನಿಂದ ನರಳುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಯಾವುದೇ ಪಾಠ-ಪ್ರವಚನಗಳು ನಡೆದಿರುವುದಿಲ್ಲ. ಹೀಗಿರುತ್ತಾ ವಿದ್ಯಾರ್ಥಿಗಳು ಓದದೆ, ಪರೀಕ್ಷೆ ಬರೆಯಿರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಂಭಿರವಾಗಿ ಯೋಚನೆ ಮಾಡಬೇಕಾಗಿದೆ. ಆನ್‍ಲೈನ್ ಶಿಕ್ಷಣ ಸಂಪೂರ್ಣ ವಿಫಲವಾಗಿದ್ದು, ಆನ್‍ಲೈನ್ ಪರೀಕ್ಷೆ ಮಾಡುವುದಾದರೇ ಲ್ಯಾಪ್ ಟಾಪ್, ಮೊಬೈಲ್ ಜೊತೆಗೆ ವಿದ್ಯುತ್ ಸರಿಯಾಗಿ ಸರಕಾರ ಒದಗಿಸಬೇಕು. ಇಂಟರ್‍ನೆಟ್ ಸರಿಯಾಗಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಆನ್‍ಲೈನ್ ತರಗತಿ ಅದೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದ ವಾಟಾಳ್ ನಮ್ಮಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವುದರಿಂದ ಈ ವ್ಯವಸ್ಥೆಗಳನ್ನು ಸರಿಪಡಿಸುವುದು ಅಷ್ಟು ಸುಲಭವಲ್ಲ. ಜೊತೆಗೆ ಆನ್‍ಲೈನ್ ಪಾಠ ಬಹುತೇಕರಿಗೆ ಅರ್ಥವಾಗುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.

ಎಸ್ಸೆಸ್ಸೆಲ್ಸಿ ಹೊರಟಿರುವ ಸರಕಾರ ಸುಮಾರು 9 ಲಕ್ಷ ಮಕ್ಕಳು ಮತ್ತು ಪೆÇೀಷಕರು, 10 ಲಕ್ಷ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದರೆ ಎಂದು ಪ್ರಶ್ನಿಸಿದ ಅವರು ಮೊದಲು ನಮ್ಮ ಜೀವ, ನಂತರ ಪರೀಕ್ಷೆಯಾಗಲಿ. ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಳೇಗಾರಿಕೆ ಮಾಡುತ್ತಿದ್ದು, ಈ ಬಗ್ಗೆ ಸರಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರಕಾರ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಕ್ರಮ ಕೈಗೊಳ್ಳಬೇಕು, ಇಲ್ಲವೇ ಮಕ್ಕಳ ಜೀವ ಭದ್ರತೆಗೆ 50 ಲಕ್ಷ ರೂಪಾಯಿ ಹಾಗೂ ಶಿಕ್ಷಕರ ಜೀವ ಭದ್ರತೆಗೆ 25 ಲಕ್ಷ ರೂಪಾಯಿ ಮೀಸಲಿಟ್ಟು ಪರೀಕ್ಷೆ ನಡೆಸಬೇಕು ಎಂದು ವಾಟಾಳ್ ನಾಗರಾಜ್ ಸರಕಾರವನ್ನು ಆಗ್ರಹಿಸಿದರು. 
  • Blogger Comments
  • Facebook Comments

1 comments:

  1. E ondu year makalu kaliyadidara yanu madalu sadyava?nimma makala mala Neva javabdari ...Satha mala exam baryalika agala...💛stay safe❤ stay home💙

    ReplyDelete

Item Reviewed: ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟ ಬೇಡ, ಎಲ್ಲ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿ: ವಾಟಾಳ್ ನಾಗರಾಜ್ ಆಗ್ರಹ Rating: 5 Reviewed By: karavali Times
Scroll to Top