ಬಂಟ್ವಾಳ (ಕರಾವಳಿ ಟೈಮ್ಸ್) : ಬಡಕಬೈಲು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಇದರ ಲೋಗೋ ಬಿಡುಗಡೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಮುಂದೇನು? ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಭಾನುವಾರ ಅಮ್ಮುಂಜೆ ಅನದಾನಿತ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಬಂಟ್ವಾಳ ಗ್ರಾಮಾಂತರ ಠಾಣಾ ಪ್ರೊಬೆಷನರಿ ಪಿಎಸ್ಸೈ ನಶ್ರೀನ್ ಕಾರ್ಯಕ್ರಮ ಉದ್ಘಾಟಿಸಿದರು. ಫೌಂಡೇಶನ್ ಸ್ಥಾಪಕಾಧ್ಯಕ್ಷ ಇಬ್ರಾಹಿಂ ನವಾಝ್ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಇಂಜಿನಿಯರ್ ಕಾಲೇಜು ನಿರ್ದೇಶಕ ದೇವದಾಸ್, ಮಂಗಳೂರು ಮನಪಾ ಸಹಾಯಕ ಇಂಜಿನಿಯರ್ ಅಬ್ದುಲ್ ಖಾದರ್, ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಅಬೂಬಕ್ಕರ್ ಅಮ್ಮುಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಮುಂಜೆ ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷೆ ಪ್ರೇಮಲತಾ, ಸದಸ್ಯರುಗಳಾದ ಅಬ್ದುಲ್ ರಝಾಕ್ ಕಲಾಯಿ, ಹರೀಶ್ ಅಮ್ಮುಂಜೆ, ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಪ್ರಮುಖರಾದ ಚಂದ್ರಶೇಖರ್ ಭಂಡಾರಿ ಕಲಾಯಿ, ಕೆ.ಎಂ. ಅಬೂಬಕ್ಕರ್ ಅಮುಂಜೆ, ಬಿ.ಎ. ಹಮೀದ್ ಮುಡೈಕೋಡಿ, ನವಾಝ್ ಮುಡೈಕೋಡಿ, ಫೌಂಡೇಶನ್ ಸಲಹೆಗಾರ ಬಶೀರ್ ಅಹ್ಮದ್ ಗಾಣೆಮಾರ್, ಕಾರ್ಯಾಧ್ಯಕ್ಷ ಅಲ್ತಾಫ್ ಪಂಚಮೆ, ಉಪಾಧ್ಯಕ್ಷ ರಮ್ಲಾನ್ ಕಲಾಯಿ, ಸಂಘಟನಾ ಕಾರ್ಯದರ್ಶಿ ಶರೀಫ್ ಬಡಕಬೈಲ್ ಮೊದಲಾದವರು ಉಪಸ್ಥಿತರಿದ್ದರು.
ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಸಮಿತಿ ಸಲಹೆಗಾರ ಹಕೀಂ ತಾಳಿಪ್ಪಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆರಿಫ್ ಕಮ್ಮಾಜೆ ಪ್ರಸ್ತಾವನೆಗೈದರು. ಕೋಶಧಿಕಾರಿ ಹಮೀದ್ ವರಕೋಡಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಎಸ್ಸಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರನ್ನು ಸನ್ಮಾನಿಸಲಾಯಿತು. ಕಾಲು ಬೆರಳುಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತಮ ಅಂಕ ಸಾಧನೆಗೈದ ಬಂಟ್ವಾಳ-ಕಂಚಿಕಾರಪೇಟೆ ನಿವಾಸಿ ಕೌಶಿಕ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
0 comments:
Post a Comment