ಮಾಜಿ ಶಾಸಕ ಐವನ್ ಡಿ’ಸೋಜಾ ದಂಪತಿಗೆ ಕೊರೋನಾ ಪಾಸಿಟಿವ್ - Karavali Times ಮಾಜಿ ಶಾಸಕ ಐವನ್ ಡಿ’ಸೋಜಾ ದಂಪತಿಗೆ ಕೊರೋನಾ ಪಾಸಿಟಿವ್ - Karavali Times

728x90

1 August 2020

ಮಾಜಿ ಶಾಸಕ ಐವನ್ ಡಿ’ಸೋಜಾ ದಂಪತಿಗೆ ಕೊರೋನಾ ಪಾಸಿಟಿವ್

ಡಿಕೆಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಕೈ ನಾಯಕರು ಹಾಗೂ ಕಾರ್ಯಕರ್ತರಿಗೆ ಕ್ವಾರಂಟೈನ್ ಭೀತಿ


ಮಂಗಳೂರು (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ ಹಾಗೂ ಅವರ ಪತ್ನಿ ಡಾ. ಕವಿತಾ ಅವರಿಗೆ ಶನಿವಾರ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಐವನ್ ಅವರೇ ಫೇಸ್ಬುಕ್ ಪೆÇೀಸ್ಟ್ ಮಾಡಿದ್ದು, ನನಗೆ ಹಾಗೂ ನನ್ನ ಪತ್ನಿ ಡಾ. ಕವಿತಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಸ್ವಯಂಪ್ರೇರಿತರಾಗಿ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡೆವು. ಈ ವೇಳೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು ಹಾಗೂ ಬೆಂಬಲಿಗರು ನಮ್ಮನ್ನು ಭೇಟಿಯಾಗಲು ಬರಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರಾರ್ಥನೆ, ಹಾರೈಕೆಯೇ ನಮಗೆ ಶಕ್ತಿ ಎಂದು ಬರೆದುಕೊಂಡಿದ್ದಾರೆ.

    ಐವನ್ ಡಿ’ಸೋಜಾ ಪತ್ನಿ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿದ್ದು, ಅವರಿಗೂ ಸೋಂಕು ತಗುಲಿದೆ. ಐವನ್ ದಂಪತಿಗೆ ಸೋಂಕು ದೃಢಪಟ್ಟಿರುವುದು ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗಣ್ಯಾತಿಗಣ್ಯ ಕಾಂಗ್ರೆಸ್ ನಾಯಕರಿಗೆ ಕ್ವಾರಂಟೈನ್ ಭೀತಿ ಎದುರಾಗಿದೆ.

    ಶುಕ್ರವಾರ ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಹುತೇಕ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಭಾಗಹಿಸಿದ್ದರು. ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡಾ ಐವನ್ ಡಿ’ಸೋಜಾ ಅವರು ಡಿಕೆಶಿ ಜೊತೆಗಿದ್ದರು. ಅಲ್ಲಿಯೂ ಕೈ ನಾಯಕರು ಜೊತೆಯಾಗಿಯೇ ಇದ್ದರು. ಮಾಜಿ ಸಚಿವ ರಮಾನಾಥ ರೈ, ಶಾಸಕ ಯು ಟಿ ಖಾದರ್, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಜೆ ಆರ್ ಲೋಬೋ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾವರು ಭಾಗವಹಿಸಿದ್ದರು. ಇದೀಗ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಕ್ವಾರಂಟೈನ್ ಭೀತಿ ಎದುರಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಶಾಸಕ ಐವನ್ ಡಿ’ಸೋಜಾ ದಂಪತಿಗೆ ಕೊರೋನಾ ಪಾಸಿಟಿವ್ Rating: 5 Reviewed By: karavali Times
Scroll to Top