ಕೋಟ್ಯಂತರ ಭಾರತೀಯರ ಶತಮಾನಗಳ ಕಾಯುವಿಕೆ ಅಂತ್ಯ, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣ: ಪ್ರಧಾನಿ ಮೋದಿ - Karavali Times ಕೋಟ್ಯಂತರ ಭಾರತೀಯರ ಶತಮಾನಗಳ ಕಾಯುವಿಕೆ ಅಂತ್ಯ, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣ: ಪ್ರಧಾನಿ ಮೋದಿ - Karavali Times

728x90

5 August 2020

ಕೋಟ್ಯಂತರ ಭಾರತೀಯರ ಶತಮಾನಗಳ ಕಾಯುವಿಕೆ ಅಂತ್ಯ, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣ: ಪ್ರಧಾನಿ ಮೋದಿ



ಅಯೋಧ್ಯೆ (ಕರಾವಳಿ ಟೈಮ್ಸ್) : ಭಗವಾನ್ ಶ್ರೀರಾಮನ ಮಂದಿರಕ್ಕಾಗಿ ಕೋಟ್ಯಂತರ ಭಾರತೀಯರ ಶತಮಾನಗಳ ಕಾಯುವಿಕೆ ಅಂತ್ಯವಾಗಲಿದ್ದು, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬುಧವಾರ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿದ ಅವರು, ‘ಜೈ ಶ್ರೀರಾಂ ಘೋಷಣೆಯ ಈ ಧ್ವನಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಎಲ್ಲರಿಗೂ ಅಭಿನಂದನೆಗಳು. ಇಂದು ಇಡೀ ದೇಶ ರೋಮಾಂಚಿತವಾಗಿದೆ. ಎಲ್ಲವೂ ರಾಮಮಯ. ಎಲ್ಲರ ಮನಸ್ಸೂ ಬೆಳಗುತ್ತಿದೆ. ಇಡೀ ಭಾರತ ಬಾವುಕವಾಗಿದೆ. ಬಹುಕಾಲದ ನಿರೀಕ್ಷೆ ಇಂದು ಕೊನೆಯಾಗಿದೆ ಎಂದರು.

ದೇಶದ ಕೋಟಿ ಕೋಟಿ ರಾಮಭಕ್ತರಿಗೆ ಈ ಶುಭ ದಿನದ ಕೋಟಿ ಕೋಟಿ ಶುಭಾಶಯಗಳು. ಈ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾಗಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ಗೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದಾನೆ. ಭಾರತವು ಇಂದು ಸೂರ್ಯನ ಸನ್ನಿಧಿಯಲ್ಲಿ, ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಇಡೀ ದೇಶವು ಇಂದು ರಾಮಮಯವಾಗಿದೆ. ಇಡೀದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸಿನಲ್ಲಿಯೂ ಜ್ಯೋತಿ ಬೆಳಗುತ್ತಿದೆ. ಪೂರ್ತಿ ಭಾರತ ಭಾವುಕವಾಗಿದೆ. ಸಮಸ್ತ ಭಾರತೀಯರ ಹಲವು ವರ್ಷಗಳ ಕಾಯುವಿಕೆ ಇಂದು ಅಂತ್ಯವಾಗಿದ್ದು, ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದಿದ್ದರು. ಇದೀಗ ರಾಮ ಜನ್ಮ ಸ್ಥಳ ಅಯೋಧ್ಯೆಯಲ್ಲಿ ನಮ್ಮ ರಾಮಲಲ್ಲಾನಿಗಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದರು.

ಶ್ರೀರಾಮಚಂದ್ರ ಪರಿವರ್ತನೆಯ ಪ್ರತಿಪಾದಕ. ಶ್ರೀರಾಮನು ವಿರೋಧದ ಬದಲಾಗಿ ನಮಗೆ ಬೋಧ, ಶೋಧಗಳ ದಾರಿ ತೋರಿಸಿದ. ಆತನ ಜೀವನಾದರ್ಶಗಳನ್ನು ಪಾಲಿಸುತ್ತ ನಾವೆಲ್ಲರೂ ಸ್ವಾವಲಂಬಿ ಭಾರತವನ್ನು ನಿರ್ಮಿಸೋಣ. ಯುಗ ಯುಗಗಳ ತನಕ ಈ ರಾಮಮಂದಿರ ಜಗತ್ತಿಗೆ ಮಾನವತೆಯ ಮಾರ್ಗದರ್ಶನ ಮಾಡಲಿದೆ. ಸದ್ಯ ನಾವೆಲ್ಲರೂ ಮುನ್ನಡೆಯಬೇಕು. ಭಾರತವೂ ಮುನ್ನಡೆಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮಾಡಬೇಕು. ಎಲ್ಲರಿಗೂ ಆರೋಗ್ಯ ನೀಡುವಂತೆ ಶ್ರೀರಾಮಚಂದ್ರ, ಸೀತಾದೇವಿಯರಲ್ಲಿ ಕೇಳಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು.






  • Blogger Comments
  • Facebook Comments

0 comments:

Post a Comment

Item Reviewed: ಕೋಟ್ಯಂತರ ಭಾರತೀಯರ ಶತಮಾನಗಳ ಕಾಯುವಿಕೆ ಅಂತ್ಯ, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣ: ಪ್ರಧಾನಿ ಮೋದಿ Rating: 5 Reviewed By: karavali Times
Scroll to Top