ಭಗವಾನ್ ರಾಮ ಅತ್ಯುತ್ತಮ ಮಾನಗ ಗುಣಗಳ ಪ್ರತೀಕ, ರಾಮ ಅಂದರೆ ಪ್ರೀತಿ, ಸಹಾನುಭೂತಿ, ನ್ಯಾಯ : ರಾಹುಲ್ ಗಾಂಧಿ - Karavali Times ಭಗವಾನ್ ರಾಮ ಅತ್ಯುತ್ತಮ ಮಾನಗ ಗುಣಗಳ ಪ್ರತೀಕ, ರಾಮ ಅಂದರೆ ಪ್ರೀತಿ, ಸಹಾನುಭೂತಿ, ನ್ಯಾಯ : ರಾಹುಲ್ ಗಾಂಧಿ - Karavali Times

728x90

5 August 2020

ಭಗವಾನ್ ರಾಮ ಅತ್ಯುತ್ತಮ ಮಾನಗ ಗುಣಗಳ ಪ್ರತೀಕ, ರಾಮ ಅಂದರೆ ಪ್ರೀತಿ, ಸಹಾನುಭೂತಿ, ನ್ಯಾಯ : ರಾಹುಲ್ ಗಾಂಧಿ



ನವದೆಹಲಿ (ಕರಾವಳಿ ಟೈಮ್ಸ್) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಬುಧವಾರ ನೆರವೇರಿದ ಬೆನ್ನಿಗೇ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಭಗವಾನ್ ಶ್ರೀರಾಮನನ್ನು ಸ್ಮರಿಸಿಕೊಂಡು ಕೊಂಡಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಗವಾನ್ ರಾಮ ಅತ್ಯುತ್ತಮ ಮಾನವ ಗುಣಗಳ ಪ್ರತೀಕ. ಆ ಗುಣಗಳು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ಬೆಳೆಸುತ್ತವೆ. ರಾಮ ಎಂದರೆ ಪ್ರೀತಿ, ಅದು ಎಂದಿಗೂ ಅಸಹ್ಯವಾಗಿ ಕಾಣುವುದಿಲ್ಲ. ರಾಮ ಎಂದರೆ ಸಹಾನುಭೂತಿ ಅದು ಎಂದಿಗೂ ಕ್ರೂರವಾಗಿ ಕಾಣಿಸುವುದಿಲ್ಲ. ರಾಮ ಎಂದರೆ ನ್ಯಾಯ ಅಲ್ಲಿ ಎಂದಿಗೂ ಅನ್ಯಾಯಕ್ಕೆ ಜಾಗವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ರಾಮಮಂದಿರ ಶಿಲಾನ್ಯಾಸದ ಕುರಿತು ಟ್ವೀಟ್ ಮಾಡಿದ್ದ ಪ್ರಿಯಾಂಕಾ ಗಾಂಧಿ, ಶ್ರೀರಾಮ ಸರಳತೆ, ಸಂಯಮ, ತ್ಯಾಗ, ವಚನಬದ್ಧತೆ, ದೀನ ಬಂಧುವಾಗಿದ್ದಾನೆ. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ನಿಗದಿಯಾಗಿದ್ದ ರಾಮಮಂದಿರ ಭೂಮಿ ಪೂಜೆ ಸಮಾರಂಭ, ರಾಮನ ಸಂದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯದ ಆಚರಣೆಯಾಗಲಿದೆ ಎಂದು ಭಾವಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದರು.






  • Blogger Comments
  • Facebook Comments

0 comments:

Post a Comment

Item Reviewed: ಭಗವಾನ್ ರಾಮ ಅತ್ಯುತ್ತಮ ಮಾನಗ ಗುಣಗಳ ಪ್ರತೀಕ, ರಾಮ ಅಂದರೆ ಪ್ರೀತಿ, ಸಹಾನುಭೂತಿ, ನ್ಯಾಯ : ರಾಹುಲ್ ಗಾಂಧಿ Rating: 5 Reviewed By: karavali Times
Scroll to Top