ಬಂಟ್ವಾಳ (ಕರಾವಳಿ ಟೈಮ್ಸ್) : ಪುದು ಗ್ರಾಮದ ಪೇರಿಮಾರ್-ನಾಣ್ಯ ಅಂಗನವಾಡಿ ಕೇಂದ್ರದಲ್ಲಿ ದೇಶದ 74ನೇ ಸ್ವಾತಂತ್ರ್ಯೋತ್ಸವ ಅತ್ಯಂತ ಸರಳವಾಗಿ ಆಚರಿಸಲಾಯಿತು. ಪುದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಹಾಗೂ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಹಾಶೀರ್ ಪೇರಿಮಾರ್ ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಿಂದ ಬ್ರಿಟಿಷರನ್ನು ಅಹಿಂಸೆ, ಉಪವಾಸ, ಸತ್ಯಾಗ್ರಹದಂತಹ ಅಸ್ತ್ರಗಳ ಮೂಲಕ ಹಿಮ್ಮೆಟ್ಟಿಸಿರುವುದು ಭಾರತೀಯರ ಸಾತ್ವಿಕ ಶಕ್ತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸೇನಾನಿಗಳನ್ನು ಸ್ಮರಿಸಿಕೊಳ್ಳುತ್ತ ಪ್ರತಿಯೊಬ್ಬರೂ ಅವರ ದೇಶಭಕ್ತಿಯ ಆದರ್ಶ ಮತ್ತು ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಅಖಂಡ, ಬಲಿಷ್ಠ, ಸುಂದರ ಸೌಹಾರ್ಧ ಭಾರತ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಪೇರಿಮಾರ್ ಮಸ್ಜಿದುಳ್ ಖಿಳ್‍ರ್ ಕೋಶಾಧಿಕಾರಿ ಹುಸೈನ್ ಬಾಲ್ದಬೋಟ್ಟು, ಬಾಲವಿಕಾಸ ಸಮಿತಿ ಸದಸ್ಯ ಉಮರಬ್ಬ ಪೇರಿಮಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಶೌಕತ್ ಆಲಿ ಮಾರಿಪಳ್ಳ, ಫಾಝಿಲ್ ಪೇರಿಮಾರ್, ಹಮೀದ್ ಪೇರಿಮಾರ್, ಆಮೀನ್ ಮಾಲಿಕ್ ಬಾಲ್ದಬೊಟ್ಟು, ನಿಯಾಝ್ ಅಹ್ಮದ್ ಪೇರಿಮಾರ್, ಉನೈಸ್ ಬಾಲ್ದಬೊಟ್ಟು, ಸಲೀಂ ಪೇರಿಮಾರ್, ಇಕ್ಬಾಲ್ ಪೇರಿಮಾರ್, ಶಾಹೀದ್ ಪೇರಿಮಾರ್, ಹಫೀಝ್ ಪೇರಿಮಾರ್, ಜುನೈದ್ ಪೇರಿಮಾರ್, ಅಂಗನವಾಡಿ ಶಿಕ್ಷಕಿ ಕುಸುಮಾ, ಸಹಾಯಕ ಶಿಕ್ಷಕಿ ಅಶ್ವಿನಿ ಕುಮಾರಿ, ಆಶಾ ಕಾರ್ಯಕರ್ತೆ ಕುಸುಮಾ ನಾಣ್ಯ, ಮಜೀದ್ ಎಂ.ಎನ್. ಪೇರಿಮಾರ್ ಮೊದಲಾದವರು ಭಾಗವಹಿಸಿದ್ದರು.


























0 comments:
Post a Comment