ಮಂಗಳೂರು : ಪಂಪ್‍ವೆಲ್ ತಖ್ವಾ ಮಸೀದಿಗೆ ದುಷ್ಕರ್ಮಿಗಳಿಂದ ಸೋಡಾ ಬಾಟ್ಲಿ ಎಸೆತ - Karavali Times ಮಂಗಳೂರು : ಪಂಪ್‍ವೆಲ್ ತಖ್ವಾ ಮಸೀದಿಗೆ ದುಷ್ಕರ್ಮಿಗಳಿಂದ ಸೋಡಾ ಬಾಟ್ಲಿ ಎಸೆತ - Karavali Times

728x90

21 August 2020

ಮಂಗಳೂರು : ಪಂಪ್‍ವೆಲ್ ತಖ್ವಾ ಮಸೀದಿಗೆ ದುಷ್ಕರ್ಮಿಗಳಿಂದ ಸೋಡಾ ಬಾಟ್ಲಿ ಎಸೆತ

 

ಪೊಲೀಸರಿಗೆ ಸವಾಲಾದ ಜಿಲ್ಲೆಯ ಸರಣಿ ಅಹಿತಕರ ಘಟನೆಗಳು

ಧಾರ್ಮಿಕ ಭಾವನೆ ಕೆರಳಿಸಿ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕಲು ನಾಗರಿಕ ಸಮಾಜದ ಆಗ್ರಹ


ಮಂಗಳೂರು (ಕರಾವಳಿ ಟೈಮ್ಸ್) : ನಗರದ ಪಂಪ್‍ವೆಲ್‍ನಲ್ಲಿರುವ ತಖ್ವಾ ಮಸೀದಿಗೆ ಕಿಡಿಗೇಡಿಗಳು ಕಲ್ಲೆಸೆತ ನಡೆದಿ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ಶುಕ್ರವಾರ ತಡ ರಾತ್ರಿ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮಸೀದಿಯ ಕಾವಲುಗಾರರ ಗಮನಕ್ಕೆ ಬಾರದಂತೆ ನಾಜೂಕಾಗಿ ಕಿಡಿಗೇಡಿಗಳು ದುಷ್ಕøತ್ಯ ನಡೆಸಿ ಪರಾರಿಯಾಗಿದ್ದಾರೆ. 

ಕಾವಲುಗಾರರು ಶನಿವಾರ ಮುಂಜಾನೆ ಮಸೀದಿಯ ಮಹಡಿ ಏರಿದಾಗ ಘಟನೆ ಗಮನಕ್ಕೆ ಬಂದಿದೆ. ತಕ್ಷಣ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

ಇತ್ತೀಚೆಗಷ್ಟು ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತ ಭವನದ ಕಿಟಕಿ ಗಾಜಿಗಳನ್ನು ದುಷ್ಕರ್ಮಿಗಳು ಕಲ್ಲು ಎಸೆದು ಪುಡಿ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೀಸಿ ಟೀವಿ ಫೂಟೇಜ್ ಆಧಾರದಲ್ಲಿ ತನಿಖೆ ನಡೆಸಿದ 6 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಪಂಪ್‍ವೆಲ್ ಮಸೀದಿಗೆ ಸೋಡಾ ಬಾಟಲಿ ಎಸೆಯಲಾಗಿದ್ದು, ಜಿಲ್ಲೆಯಲ್ಲಿ ದುಷ್ಕøತ್ಯಕ್ಕೆ ಕಿಡಿಗೇಡಿಗಳು ಸಂಚು ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದ್ದು, ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. 

ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳನ್ನು ನಡೆಸಿ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಬೇಕು ಎಂದು ನಾಗರಿಕ ಸಮಾಜ ಆಗ್ರಹಿಸಿದೆ. 

ಖಂಡನೆ

ಪಂಪ್ವೆಲ್ ತಕ್ವಾ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದಿರುವ ಘಟನೆಯನ್ನು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ರಾಜ್ಯ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ತೀವ್ರವಾಗಿ ಖಂಡಿಸಿದ್ದಾರೆ. 

ಇದೊಂದು ಕರಾವಳಿಯ ಶಾಂತಿಯನ್ನು ಕದಡುವ ಯತ್ನವಾಗಿದ್ದು, ಇದರ ಹಿಂದೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಅಡಗಿದೆ. ಘಟನೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ತರನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಕರಾವಳಿಯ ಶಾಂತಿ ಸೌಹಾರ್ದತೆಯ ರಕ್ಷಣೆಗೆ ಕಟಿಬದ್ದರಾಗಬೇಕು. ಅಲ್ಲದೆ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಪೊಲೀಸ್ ರಕ್ಷಣೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ. 











  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಪಂಪ್‍ವೆಲ್ ತಖ್ವಾ ಮಸೀದಿಗೆ ದುಷ್ಕರ್ಮಿಗಳಿಂದ ಸೋಡಾ ಬಾಟ್ಲಿ ಎಸೆತ Rating: 5 Reviewed By: karavali Times
Scroll to Top