ರಾಜ್ಯಸಭಾ ಸದಸ್ಯ, ಎಸ್ಪಿ ನಾಯಕ ಅಮರ್ ಸಿಂಗ್ ನಿಧನ - Karavali Times ರಾಜ್ಯಸಭಾ ಸದಸ್ಯ, ಎಸ್ಪಿ ನಾಯಕ ಅಮರ್ ಸಿಂಗ್ ನಿಧನ - Karavali Times

728x90

1 August 2020

ರಾಜ್ಯಸಭಾ ಸದಸ್ಯ, ಎಸ್ಪಿ ನಾಯಕ ಅಮರ್ ಸಿಂಗ್ ನಿಧನನವದೆಹಲಿ (ಕರಾವಳಿ ಟೈಮ್ಸ್) :
ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ (64) ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾಗಿದ್ದಾರೆ.

    ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮರ್ ಸಿಂಗ್ ಅವರು ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಅಪರಾಹ್ನದ ವೇಳೆಗೆ ಮೃತಪಟ್ಟಿದ್ದಾರೆ.

    ಅಮರ್ ಸಿಂಗ್ ಅವರು 2013 ರಿಂದ ಕಿಡ್ನಿ ಸಂಬಂಧಿ ಸಹಿತ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇತ್ತೀಚೆಗೆ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. 2010ರ ಜನವರಿ ತಿಂಗಳಲ್ಲಿ ಸಿಂಗ್ ಅವರು ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ನಂತರ ನಡೆದ ವಿದ್ಯಾಮಾನಗಳ ಬಳಿಕ ಅವರು 2016 ರಲ್ಲಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾದರು.


  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯಸಭಾ ಸದಸ್ಯ, ಎಸ್ಪಿ ನಾಯಕ ಅಮರ್ ಸಿಂಗ್ ನಿಧನ Rating: 5 Reviewed By: karavali Times
Scroll to Top