ಬೆಂಗಳೂರು (ಕರಾವಳಿ ಟೈಮ್ಸ್) : ಎ ಆಂಡ್ ಎ ಫೌಂಡೇಶನ್ ಹಲಸೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಚ್‍ಆರ್‍ಡಬ್ಲ್ಯುಎ) ಇದರ ಸಹಯೋಗದೊಂದಿಗೆ ಹಲಸೂರು ಕೆರೆಯ ಕಲ್ಯಾಣಿ ಬಳಿ ವಾರ್ಡ್ ನಂ. 90ರ ವ್ಯಾಪ್ತಿಯ 35 ಪೌರಕರ್ಮಿಕರಿಗೆ ಪೌಷ್ಟಿಕಾಂಶ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪೌರ ಕಾರ್ಮಿಕರ ಸಂಪೂರ್ಣ ಯೋಗ ಕ್ಷೇಮವನ್ನು ಖಾತರಿಪಡಿಸುವ ಉದ್ದೇಶದಿಂದ, ಎ ಅಂಡ್ ಎ ಫೌಂಡೇಶನ್ ಎಂ.ಎಲ್. ಅಮರ್‍ನಾಥ್ ಹಾಗೂ ಅನುಪಮಾ ಅಮರ್‍ನಾಥ್ ಅವರು ತಮ್ಮ ಸಾಮಾಜಿಕ ಕಳಕಳಿ ಕಾರ್ಯಕ್ರಮವಾದ “ವೃದ್ಧಿ” ಅಡಿ ಎನ್ಲೈಟ್ಲೈಫ್ 365 ಹ್ಯಾಲೆರಿಚ್ 1 ಎನ್ಲೈಟ್ಲೈಫ್ ಸೂಪರ್ ಫುಡ್ ಮೆಟಾಬಾಲಿಸಮ್ ಮತ್ತು ಇಮ್ಯೂನಿಟಿ ಬೂಸ್ಟರ್ ಕಿಟ್, ಪೌಷ್ಠಿಕಾಂಶ ಕಾರ್ಯಕ್ರಮದ ಭಾಗವಾಗಿ ಈ ಪೌಷ್ಠಿಕಾಂಶ ಆಹಾರ ನೀಡಿಕೆ, ವೈದ್ಯಕೀಯ ಸಮಾಲೋಚನೆ ಮತ್ತು ಅಗತ್ಯ ರಕ್ತ ಪರೀಕ್ಷೆಗಳು ವರ್ಷಕ್ಕೆ ಮೂರು ಬಾರಿ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಾರ್ಡ್ ನಂ. 90 ರ ಕಾರ್ಪೊರೇಟರ್ ಮಮತಾ ಸರವಣ, ಎಚ್‍ಆರ್‍ಡಬ್ಲ್ಯೂಎ ಅಧ್ಯಕ್ಷ ಮಹೇಂದ್ರ ಜೈನ್, ಉಪಾಧ್ಯಕ್ಷ ಮೋಹನ್ ಕುಮಾರ್ ಪಿ.ಕೆ., ಹಿರಿಯ ಆಹಾರ ವಿಜ್ಞಾನಿ ಎನ್ಲೈಟ್ಲೈಫ್ ಸಂಸ್ಥೆಯ ಡಾ. ಗೋವರ್ಧನ್, ಕೇರ್ ಆನ್ ಕಾಲ್ ಸಂಸ್ಥೆಯ ಡಾ. ನವನೀತ್ ಮೊಟ್ರೆಜಾ ಭಾಗವಹಿಸಿದ್ದರು.
ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಮ್ಮಲ್ಲಿ ಹೆಚ್ಚಿನವರು ಸಾಮಾಜಿಕ ದೂರ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮನೆಯೊಳಗೆ ಇರಲು ಒತ್ತಾಯಿಸಲಾಗುತ್ತಿದೆ. ಅಲ್ಲದೇ ಭೀತಿಗೊಳಿಸುವ ಕೊರೊನಾ ವೈರಸ್‍ಗೆ ತುತ್ತಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಪೌರ ಕರ್ಮಿಕರು, ನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯವನ್ನು ನಿರ್ವಹಿಸುತ್ತಾರೆ ಮತ್ತು ಸಮುದಾಯ ಪ್ರಸರಣದ ಮೂಲಕ ಸಾಂಕ್ರಾಮಿಕ ವೈರಸ್ ಹರಡುವುದರೊಂದಿಗೆ ಅತಿ ಬೇಗ ಸೋಂಕಿಗೆ ಒಳಗಾಗುವ ಪ್ರದೇಶದ ಪರಿಸರದಲ್ಲಿ ಓಡಾಡುತ್ತಿರುತ್ತಾರೆ. ಹೀಗಾಗಿ, ಈ ಸಾಮಾಜಿಕ ಯೋಧರು ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆರು ತಿಂಗಳಿಗೊಮ್ಮೆ ಡೈವಮಿರ್‍ಂಗೆ ಒಳಗಾಗುವುದು ಅತ್ಯಂತ ಮಹತ್ವದ್ದಾಗಿದೆ.



















0 comments:
Post a Comment