ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾವೂರ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.
ಸಭೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದರು.
ಈ ಸಂದರ್ಭ ಚುನಾವಣೆ ಸಲಹಾ ಸಮಿತಿ ಸದಸ್ಯರಾದ ಬಿ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜಗದೀಶ್ ಕೊಯಿಲ, ಜನಾರ್ದನ ಚೆಂಡ್ತಿಮಾರ್, ಸಂಪತ್ ಕುಮಾರ್ ಶೆಟ್ಟಿ, ಮುಹಮ್ಮದ್ ಸಂಗಬೆಟ್ಟು, ಪ್ರಶಾಂತ್ ಕುಲಾಲ್, ವಲಯಾಧ್ಯಕ್ಷ ಪುಷ್ಪರಾಜ್ ನಾವೂರ, ಮುಖಂಡರಾದ ಸದಾನಂದ ನಾವೂರ, ಬೇಬಿ ಸುವರ್ಣ, ಪದ್ಮಶೇಖರ್ ಜೈನ್ ಬೀದಿ, ಏಜೇ ಮೊರಾಸ್, ಸುವರ್ಣ ಕುಮಾರ್ ಜೈನ್, ಫಾರೂಕ್ ನಾವೂರ, ಕರೀಮ್ ಪೆರ್ಲ, ಹಕೀಂ ಪಾಂಗೊಡಿ, ದಿನೇಶ್ ಪೂಜಾರಿ, ಗಿರಿಜಾ ಪೂಜಾರಿ, ಗುಲಾಬಿ ಚಂದಪ್ಪ ನಾಯ್ಕ, ಹಮೀದ್ ಮೈಂದಾಲ, ಶಂಕರ್ ಕಾಲೊನಿ, ವಿಜಯ ಕಾಲೊನಿ, ಸತೀಶ್ ಮಲೇಕೊಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment