ಐಪಿಎಲ್ ಇತಿಹಾಸದಲ್ಲೆ ದಾಖಲೆ ನಿರ್ಮಿಸಿದ ಸಿರಾಜ್ ಪರಾಕ್ರಮ - Karavali Times ಐಪಿಎಲ್ ಇತಿಹಾಸದಲ್ಲೆ ದಾಖಲೆ ನಿರ್ಮಿಸಿದ ಸಿರಾಜ್ ಪರಾಕ್ರಮ - Karavali Times

728x90

21 October 2020

ಐಪಿಎಲ್ ಇತಿಹಾಸದಲ್ಲೆ ದಾಖಲೆ ನಿರ್ಮಿಸಿದ ಸಿರಾಜ್ ಪರಾಕ್ರಮಕೆಕೆಆರ್ ವಿರುದ್ದ ಕೊಹ್ಲಿ ಪಡೆಗೆ 8 ವಿಕೆಟ್‍ಗಳ ಸುಲಭ ಜಯ


ಅಬುಧಾಬಿ, ಅ. 21, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್-2020 ರ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‍ಗಳ ಭಾರೀ ಅಂತರದಿಂದ ಜಯಿಸುವ ಮೂಲಕ ರನ್ ಧಾರಣೆಯಲ್ಲಿ ಏರಿಕೆ ಕಂಡುಕೊಂಡಿದೆ. 

  ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಆರ್ಸಿಬಿ ಬೌಲರ್ ಗಳ ನಿಖರ ದಾಳಿಗೆ ಕಂಗೆಟ್ಟು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 84 ರನ್ ಗಳಿಸಲಷ್ಟೆ ಶಕ್ತವಾಯಿತು. ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ 6.3 ಓವರ್ ಬಾಕಿ ಇರುತ್ತಲೇ 8 ವಿಕೆಟ್‍ಗಳ ಅಂತರದಲ್ಲಿ ಭಾರೀ ಜಯ ದಾಖಲಿಸಿತು. ಈ ಮೂಲಕ 14 ಅಂಕಗಳನ್ನು ಗಳಿಸಿದ ಆರ್ಸಿಬಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

ಈ ಪಂದ್ಯಕ್ಕೂ ಮುನ್ನ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿದ್ದ ಕೊಹ್ಲಿ ಪಡೆ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ರನ್ ರೇಟ್ -0.096 ಇತ್ತು. ಆದರೆ ಕೆಕೆಆರ್ ವಿರುದ್ದ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ 14 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರುವುದರ ಜೊತೆಗೆ, +0.182 ರನ್‍ ಧಾರಣೆ ಹೊಂದಿದೆ.

ಕೆಕೆಆರ್ ನಿಗದಿಪಡಿಸಿದ 85 ರನ್‍ಗಳ ಕಡಿಮೆ ಮೊತ್ತದ ಗುರಿಯನ್ನು ಬ್ನೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಪವರ್ ಪ್ಲೇ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ ಆರು ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿತ್ತು. 6ನೇ ಓವರಿನ ದ್ವಿತೀಯ ಎಸೆತದಲ್ಲಿ 16 ರನ್ ಗಳಿಸಿದ್ದ ಫಿಂಚ್ ಔಟ್ ಆದರು. ಬಳಿಕ 17 ಎಸೆತಗಳಲ್ಲಿ 25 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಬಳಿಕ ಕ್ರೀಸಿನಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಗುರ್ ಕೀರತ್ ಸಿಂಗ್ ಅವರು ತಂಡದ ಗೆಲುವಿನ ಔಪಚಾರಿಕತೆಯನ್ನು ಪೂರೈಸಿದರು. ಕೊಹ್ಲಿ 17 ಎಸೆತಗಳಲ್ಲಿ ಅಜೇಯ 18 ರನ್ ಭಾರಿಸಿದರೆ, ಗುರ್ ಕೀರತ್ 26 ಎಸೆತಗಳಲ್ಲಿ 21 ರನ್ ಗಳಿಸಿ ಅಜೇಯರಾಗುಳಿದರು. 

 ಪಂದ್ಯದಲ್ಲಿ ಅದ್ಭುತ ದಾಳಿಗಾರಿಕೆ ಸಂಘಟಿಸಿದ ವೇಗಿ ಮೊಹಮ್ಮದ್ ಸಿರಾಜ್ ಅವರು ತಮ್ಮ ಕೋಟಾದ ಮೊದಲ ಎರಡು ಓವರ್ ಗಳನ್ನು ಮೇಡನ್ ಆಗಿ ಎಸೆದರಲ್ಲದೆ ಪ್ರಮುಖ 3 ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ ಇತಿಹಾಸದಲಗಲಿ ಒಂದೇ ಪಂದ್ಯದಲ್ಲಿ 2 ಮೇಡನ್ ಓವರ್ ಎಸೆದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಸಿರಾಜ್ ಗೆ ಸಾಥ್ ನೀಡಿದ ಕ್ರಿಸ್ ಮೋರಿಸ್ ಹಾಗೂ ವಾಷಿಂಗ್ಟನ್ ಸುಂದರ್ ಅವರೂ ಕೂಡಾ ತಲಾ ಒಂದು ಓವರ್ ಮೇಡನ್ ಎಸೆದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ ಓವರ್ ಮಾಡಿದ ದಾಖಲೆ ಆರ್ಸಿಬಿ ಪಾಲಾಯಿತು. 

 ಪಂದ್ಯದಲ್ಲಿ ಆರ್‍ಸಿಬಿ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಅತ್ಯುತ್ತಮ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ ಅವರು ತಮ್ಮ ಕೋಟಾದ 4 ಓವರ್ ಬೌಲ್ ಮಾಡಿ ಕೇವಲ 8 ರನ್ ಬಿಟ್ಟುಕೊಟ್ಟು ಒಟ್ಟು 3 ವಿಕೆಟ್ ಪಡೆದರೆ,  ಯಜುವೇಂದ್ರ ಚಹಲ್ ನಾಲ್ಕು ಓವರ್ ಗಳಲ್ಲಿ 15 ರನ್ ನೀಡಿ 2 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಇತಿಹಾಸದಲ್ಲೆ ದಾಖಲೆ ನಿರ್ಮಿಸಿದ ಸಿರಾಜ್ ಪರಾಕ್ರಮ Rating: 5 Reviewed By: karavali Times
Scroll to Top