ಜಾರ್ಜಿಯಾ, ನೆವೆಡಾದಲ್ಲಿ ಬೈಡನ್ ಮೇಲುಗೈ : ಅಮೇರಿಕಾ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿರುವ ಟ್ರಂಪ್ ಗೆ ಬಹುತೇಕ ಹಿನ್ನಡೆ ಖಚಿತ - Karavali Times ಜಾರ್ಜಿಯಾ, ನೆವೆಡಾದಲ್ಲಿ ಬೈಡನ್ ಮೇಲುಗೈ : ಅಮೇರಿಕಾ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿರುವ ಟ್ರಂಪ್ ಗೆ ಬಹುತೇಕ ಹಿನ್ನಡೆ ಖಚಿತ - Karavali Times

728x90

6 November 2020

ಜಾರ್ಜಿಯಾ, ನೆವೆಡಾದಲ್ಲಿ ಬೈಡನ್ ಮೇಲುಗೈ : ಅಮೇರಿಕಾ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿರುವ ಟ್ರಂಪ್ ಗೆ ಬಹುತೇಕ ಹಿನ್ನಡೆ ಖಚಿತವಾಷಿಂಗ್ಟನ್, ನ. 6, 2020 (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಜಿದ್ದಾಜಿದ್ದಿನ ಹಂತಕ್ಕೆ ತಲುಪಿದ್ದು, ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರ ಹಾದಿ ಬಹುತೇಕ ಸುಗಮವಾಗುವಂತೆ ತೋರುತ್ತಿದ್ದು, ಪುನರಾಯ್ಕೆ ಬಯಸಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. 

ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಮುಂಚೂಣಿಯಲ್ಲಿದ್ದು, ಇದೀಗ ಜಾರ್ಜಿಯಾ ಹಾಗೂ ನೆವಾಡಾದಲ್ಲೂ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಬೈಡನ್ ವೈಟ್‍ಹೌಸ್ ಹಾದಿ ಮತ್ತಷ್ಟು ಸುಗಮವಾದಂತಾಗುತ್ತಿದೆ. 

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಸಾಕಷ್ಟು ಮುಂದಿರುವ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡನ್ ಜಾರ್ಜಿಯಾ ಹಾಗೂ ನೆವಾಡಾದಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಗಾದಿ ಮತ್ತೊಮ್ಮೆ ವಶಪಡಿಸಿಕೊಳ್ಳಬೇಕೆಂಬ ಡೋನಾಲ್ಡ್ ಟ್ರಂಪ್ ಆಸೆಗೆ ಹಿನ್ನಡೆಯಾಗುತ್ತಿದೆ. ಜಾರ್ಜಿಯಾದಲ್ಲಿ ಈಗಾಗಲೇ ಶೇ 99 ರಷ್ಟು ಮತಗಳನ್ನು ಎಣಿಸಲಾಗಿದೆ.

  ಮತ ಗಳಿಕೆ ಇದೇ ರೀತಿ ಮುಂದುವರಿದಲ್ಲಿ ಜಾರ್ಜಿಯಾ ಜೋ ಬೈಡನ್ ಕೈ ವಶವಾಗುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಅಲ್ಲಿ ಗೆಲವು ಖಚಿತವಾದರೆ, ಅಮೆರಿಕಾ ಅಧ್ಯಕ್ಷ ಸ್ಥಾನ ಜೋ ಬೈಡನ್ ಅವರ ವಶವಾಗಲಿದೆ. ನೆವೆಡಾದಲ್ಲೂ ಜೋ ಬೈಡನ್ ಗೆದ್ದಿದ್ದೇ ಆದರೆ ಪಡೆಯಲಿರುವ ಮತಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಜಾರ್ಜಿಯಾ ಫಲಿತಾಂಶ ಹೊರಬಂದ ತಕ್ಷಣ ಜಗತ್ತಿನ ದೊಡ್ಡಣ್ಣನ ಅಧಿಪತಿ ಯಾರಾಗಲಿದ್ದಾರೆ ಎಂಬುದು ಖಚಿತವಾಗಲಿದೆ. 

ಶುಕ್ರವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಜೊ ಬೈಡನ್, ಯಾರು ಕೂಡ ನಮ್ಮಿಂದ ಪ್ರಜಾಪ್ರಭುತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂದು, ಮುಂದು, ಎಂದೆಂದೂ. ಅಮೆರಿಕ ಸಾಕಷ್ಟು ಮುಂದೆ ಬಂದಿದೆ. ಹಲವು ಹೋರಾಟಗಳನ್ನು ಮಾಡಿದೆ. ಅದರಿಂದ ಗೆದ್ದು ಕೂಡಾ ಬಂದಿದೆ ಎಂದು ಬರೆದುಕೊಂಡಿದ್ದರು. 

ಇತ್ತ ಅಧ್ಯಕ್ಷ ಪದವಿ ಕೈ ತಪ್ಪುವ ಸೂಚನೆ ದೊರೆಯುತ್ತಿರುವ ಬೆನ್ನಲ್ಲೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣಾ ಪ್ರಕ್ರಿಯೆ ಮೇಲೆಯೇ ಆರೋಪ ಮಾಡಿದ್ದಾರೆ. ತಮ್ಮ ಮತಗಳನ್ನು ಕದಿಯಲಾಗಿದೆ ಎಂದಿದ್ದಾರೆ. ಆದರೆ ಇದಕ್ಕೆ ಯಾವುದೇ ಪುರಾವೆ ಒದಗಿಸಲು ಟ್ರಂಪ್ ವಿಫಲರಾಗಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜಾರ್ಜಿಯಾ, ನೆವೆಡಾದಲ್ಲಿ ಬೈಡನ್ ಮೇಲುಗೈ : ಅಮೇರಿಕಾ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿರುವ ಟ್ರಂಪ್ ಗೆ ಬಹುತೇಕ ಹಿನ್ನಡೆ ಖಚಿತ Rating: 5 Reviewed By: karavali Times
Scroll to Top