ಬೆಂಗಳೂರು, ನ 5, 2020 (ಕರಾವಳಿ ಟೈಮ್ಸ್) : ಇನ್‍ವೆಸ್ಟ್ ಕರ್ನಾಟಕ ಫೋರಂ ಇದರ ನಿರ್ದೇಶಕ ಮಂಡಳಿಯ ಸಭೆಯು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಇನ್‍ವೆಸ್ಟ್ ಕರ್ನಾಟಕ ಫೋರಂ ಅಧ್ಯಕ್ಷರೂ ಆಗಿರುವ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಇನ್‍ವೆಸ್ಟ್ ಕರ್ನಾಟಕ ಫೋರಂ ಸಹ ಅಧ್ಯಕ್ಷ ಕಿರಣ್ ಮಜುಮ್‍ದಾರ್ ಶಾ, ಐಕೆಎಫ್ ಸಿಇಒ ಹಾಗೂ ಕೈಗಾರಿಕಾ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ನಿರ್ದೇಶಕರಾದ ಮೋಹನದಾಸ್ ಪೈ, ಬಿ.ವಿ. ನಾಯ್ಡು, ಲಕ್ಷ್ಮಿ ನಾರಾಯಣ, ಐಕೆಎಫ್ ಸಿಓಓ ಬಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯದ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿ ಮತ್ತು ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
0 comments:
Post a Comment