ಮಕ್ಕಿಮನೆ ಕಲಾವೃಂದದ ವತಿಯಿಂದ ಕಂಬಳ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ - Karavali Times ಮಕ್ಕಿಮನೆ ಕಲಾವೃಂದದ ವತಿಯಿಂದ ಕಂಬಳ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ - Karavali Times

728x90

5 November 2020

ಮಕ್ಕಿಮನೆ ಕಲಾವೃಂದದ ವತಿಯಿಂದ ಕಂಬಳ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಮಂಗಳೂರು, ನ 5, 2020 (ಕರಾವಳಿ ಟೈಮ್ಸ್) : ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಓಟಗಾರರಾಗಿ ಸಾಧನೆಮಾಡಿ ಈ ವರ್ಷ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪಡೆದಿರುವ ಶ್ರೀನಿವಾಸ ಗೌಡ ಮಿಜಾರು ಅಶ್ವಥಪುರ, ಪ್ರವೀಣ್ ಕೋಟ್ಯಾನ್ ಪಣಪಿಲ, ಸುರೇಶ ಎಂ. ಶೆಟ್ಟಿ ಹೊಕ್ಕಾಡಿಗೋಳಿ ಹಕ್ಕೇರಿ ಅವರನ್ನು ಮಕ್ಕಿಮನೆ ಕಲಾವೃಂದ ಮಂಗಳೂರು ಫೇಸ್‍ಬುಕ್ ಪೇಜ್ ವತಿಯಿಂದ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕಂಬಳ ಒಂದು ಕೃಷಿಕರ ಕ್ರೀಡೆಯಾಗಿದೆ ಹಾಗೂ ವೀರತೆಯ ಪ್ರತೀಕವಾಗಿ ತುಳುನಾಡಿಗೆ ಸಂದಿರುವ ಪುರಸ್ಕಾರವೂ ವೀರಕ್ರೀಡೆಗೆ ದೊರೆತ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ಕಂಬಳ ಅಕಾಡೆಮಿಯ ಸದಸ್ಯ ಹಾಗೂ ಮೂಡಬಿದ್ರೆ ಜೈನ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಲೇಖಕ ಸುನಿಲ್ ಪಣಪಿಲ, ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್, ಮೂಡಬಿದ್ರೆ ಪುರಸಭಾ ಸದಸ್ಯೆ ಶ್ವೇತಾ ಕುಮಾರಿ ಮೂಡಬಿದ್ರೆ ಮೊದಲಾದವರು ಶುಭ ಹಾರೈಸಿದರು. 

ಸುದೇಶ್ ಜೈನ್ ಮಕ್ಕಿಮನೆ ಮಂಗಳೂರು, ಅಕ್ಷಯ್ ಜೈನ್ ಕೇರ್ವಾಶೆ, ಸ್ಫೂರ್ತಿ ಜೈನ್ ಬೆಂಗಳೂರು, ನವೀನ್ ಸಂಖೀಘಟ್ಟ, ಶ್ವೇತಾ ಪಿ ಜೈನ್ ಕಲ್ಲುಗುಡ್ಡೆ ಉಪಸ್ಥಿತರಿದ್ದರು. ಪ್ರಜ್ಞಾ ಪ್ರಭು ವೇಣೂರು ಸ್ವಾಗತಿಸಿ, ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಕ್ಕಿಮನೆ ಕಲಾವೃಂದದ ವತಿಯಿಂದ ಕಂಬಳ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ Rating: 5 Reviewed By: karavali Times
Scroll to Top