ಕಲ್ಪನೆ : ಅಟೋ ರಿಕ್ಷಾ ಉರುಳಿ ಬಿದ್ದು 3 ದಿನದ ಹಸುಗೂಸು ಮೃತ್ಯು - Karavali Times ಕಲ್ಪನೆ : ಅಟೋ ರಿಕ್ಷಾ ಉರುಳಿ ಬಿದ್ದು 3 ದಿನದ ಹಸುಗೂಸು ಮೃತ್ಯು - Karavali Times

728x90

2 December 2020

ಕಲ್ಪನೆ : ಅಟೋ ರಿಕ್ಷಾ ಉರುಳಿ ಬಿದ್ದು 3 ದಿನದ ಹಸುಗೂಸು ಮೃತ್ಯು

 


ಬಂಟ್ವಾಳ, ಡಿ. 03, 2020 (ಕರಾವಳಿ ಟೈಮ್ಸ್) : ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ಅಟೋ ರಿಕ್ಷಾ ಚಾಲಕನ ನಿಯಂತ್ರಣ ಮೀರಿ ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿದ್ದು, ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೃತ ಹಸುಳೆ ಹಾಗೂ ಗಾಯಗೊಂಡವರ ವಿವರ ತಿಳಿದು ಬರಬೇಕಷ್ಟೆ. 

ಗುರುಪುರ-ಕೈಕಂಬ ಮೂಲದ ಮುಸ್ಲಿಂ ಮಹಿಳೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಿ ಸಿ ರೋಡು ಕಡೆ ಬರುವ ಖಾಲಿ ಅಂಬ್ಯುಲೆನ್ಸ್ ಮೂಲಕ ಬಂದು ಬಿ ಸಿ ರೋಡು-ಕೈಕಂಬದಲ್ಲಿ ಇಳಿದು ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಅಟೋ ರಿಕ್ಷಾ ಬಾಡಿಗೆ ಗೊತ್ತುಪಡಿಸಿ ತೆರಳಿದ್ದರು ಎನ್ನಲಾಗಿದೆ. ಅಟೋ ರಿಕ್ಷಾ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬರುತ್ತಲೇ ಚಾಲಕನ ನಿಯಂತ್ರಣ ಮೀರಿ ರಿಕ್ಷಾ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ರಿಕ್ಷಾದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.  • Blogger Comments
  • Facebook Comments

0 comments:

Post a Comment

Item Reviewed: ಕಲ್ಪನೆ : ಅಟೋ ರಿಕ್ಷಾ ಉರುಳಿ ಬಿದ್ದು 3 ದಿನದ ಹಸುಗೂಸು ಮೃತ್ಯು Rating: 5 Reviewed By: karavali Times
Scroll to Top