ಬೆಂಗಳೂರು, ಡಿ. 07, 2020 (ಕರಾವಳಿ ಟೈಮ್ಸ್) : ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ಕಟಕಿಯಾಡಿದ್ದಾರೆ. ಮುಸ್ಲಿಮರಿಗೆ ಟಿಕೆಟ್ ನೀಡಲ್ಲ ಎಂದು ಹೇಳಿದ ಈಶ್ವರಪ್ಪ ಅವರ ಮಾತನ್ನು ಅಧಿವೇಶನದಲ್ಲಿ ಸಿದ್ದು ಪ್ರಸ್ತಾಪಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ಅವರು ಈಶ್ವರಪ್ಪ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಆ ರೀತಿ ಹೇಳಿದ್ದಾರೆ ಅಷ್ಟೆ. ಪತ್ರಕರ್ತರನ್ನು ಅಂತಹ ಪ್ರಶ್ನೆಗಳನ್ನೆಲ್ಲಾ ಕೇಳಬಹುದಾ ಎಂದರಲ್ಲದೆ ನಾವು ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಉತ್ತರಿಸಿದರು.
ಈ ಸಂದರ್ಭ ಪ್ರತಿಕ್ರಯಿಸಿದ ಸಿದ್ದು, ಹೌದಪ್ಪಾ ನೀವು ಯಾರಿಗೆ ಬೇಕಾದರೂ ಟಕೆಟ್ ಕೊಡಿ, ಅದೆಲ್ಲ ನಿಮಗೆ ಬಿಟ್ಟದ್ದು. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ ನೀವು ಕಾರ್ಯಕರ್ತರಿಗೆ ಟಿಕೆಟ್ ಕೊಡಿ ಎನ್ನಿ. ಅದು ಬಿಟ್ಟು ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ ಎಂದರೆ ಹೇಗೆ ಎಂದವರು ಬಿಜೆಪಿ ಮುಖಂಡರಿಗೆ ಪ್ರಶ್ನಿಸಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಸಚಿವ ಆರ್ ಅಶೋಕ್ ಅವರು ಮುಸ್ಲಿಂ ಕಾರ್ಯಕರ್ತರು ಹೆಚ್ಚಾದರೆ ಟಿಕೆಟ್ ನೀಡುತ್ತೇವೆ, ಶಾಸಕರಾಗಿ ಮಾಡುತ್ತೇವೆ. ನಿಮ್ಮ ಯು ಟಿ ಖಾದರ್ ಅವರನ್ನು ಕಳಿಸಿ, ಟಿಕೆಟ್ ಕೊಡುತ್ತೇವೆ ಎಂದರು. ಈ ಸಂದರ್ಭ ಮತ್ತೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ ನೀವು ಸಿಎಂ ಮಾಡುತ್ತೇವೆ ಅಂದ್ರೂ ಯು ಟಿ ಖಾದರ್ ಬರಲ್ಲ ಎಂದು ತಿರುಗೇಟು ನೀಡಿದರು.
0 comments:
Post a Comment