ಬಿ.ಸಿ.ರೋಡು : ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಕಾರ್ಯಾರಂಭ - Karavali Times ಬಿ.ಸಿ.ರೋಡು : ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಕಾರ್ಯಾರಂಭ - Karavali Times

728x90

16 January 2021

ಬಿ.ಸಿ.ರೋಡು : ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಕಾರ್ಯಾರಂಭ

ಬಂಟ್ವಾಳ, ಜ. 16, 2021 (ಕರಾವಳಿ ಟೈಮ್ಸ್) : ಕುಂಬಾರರ ಗುಡಿಕೈಗಾರಿಕೆ ಸಹಕಾರ ಸಂಘದ ಕುಂಬಾರಿಕಾ ಉತ್ಪನ್ನಗಳ ಮಾರಾಟದ 3ನೇ ಮಳಿಗೆಯನ್ನು ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಗುರುವಾರ ಉದ್ಘಾಟಿಸಿದರು. ಬಿ.ಸಿ.ರೋಡು ಮಿನಿವಿಧಾನಸೌಧ ಮುಂಭಾಗದ ಅಚ್ಯುತ ಕಾಂಪ್ಲೆಕ್ಸ್‍ನ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ಆರಂಭಗೊಂಡ ಮಳಿಗೆಯ ಉತ್ಪನ್ನಗಳನ್ನು ವೀಕ್ಷಿಸಿ ಮಾತನಾಡಿದ ಅವರು ಕುಂಬಾರಿಕಾ ಉತ್ಪನ್ನಗಳ ತಯಾರಿಗೆ ಇರುವ ಶ್ರಮವನ್ನು ಅರಿತುಕೊಳ್ಳಬೇಕಾಗಿದ್ದು, ಇದಕ್ಕೆ ಸಾರ್ವಜನಿಕರ ಪೆÇ್ರೀತ್ಸಾಹ ಅಗತ್ಯ ಎಂದರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಮಾರಾಟಕ್ಕೆ ಇರುವ ಶ್ರಮ ಹಾಗೂ ಉತ್ಪನ್ನಗಳ ನಿರ್ವಹಣೆ ಮಹತ್ವದ್ದಾಗಿದೆ. ಇದಕ್ಕೆ ಪೆÇ್ರೀತ್ಸಾಹ ಅಗತ್ಯವಿದ್ದು, ಸಮುದಾಯದಲ್ಲಿ ಕುಂಬಾರಿಕೆ ನಡೆಸುವವರಿಗೆ ಸಹಕಾರ ನೀಡಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಕೆ.ಐ.ಒ.ಸಿ.ಎಲ್. ನಿವೃತ್ತ ಅಭಿಯಂತರ ಲೋಕನಾಥ ಡಿ, ಕೆನರಾ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಸುಂದರ್ ಬಿ., ಪುರಸಭಾ ಸದಸ್ಯ ಹರಿಪ್ರಸಾದ್, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಾಜಿ ಅಧ್ಯಕ್ಷ ಬಿ.ಎಸ್. ಕುಲಾಲ್, ಕಾಯಕ ಸಮಾಜದ ಕರಿಸಿದ್ದಪ್ಪ ಕುಂಬಾರ, ಎಲ್.ಐಸಿ ಉಪ ಪ್ರಧಾನ ವ್ಯವಸ್ಥಾಪಕ ಸೋಮಸುಂದರ್, ಮಾಣಿ ಕುಲಾಲ ಸಂಘದ ಗೌರವಾಧ್ಯಕ್ಷ ರಾಮಚಂದ್ರ ಮಾಸ್ತರ್, ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ., ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ, ಉಪಾಧ್ಯಕ್ಷ ದಾಮೋದರ ವಿ, ಸಂಘದ ನಿರ್ದೇಶಕರು, ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ನಾರಾಯಣ ಕುಲಾಲ್ ವಂದಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಕಾರ್ಯಾರಂಭ Rating: 5 Reviewed By: karavali Times
Scroll to Top