ನೂತನ ಸಚಿವರಿಗೆ ಖಾತೆ ಹಂಚಿಕೆ ಜೊತೆಗೆ ಸಚಿವರ ಖಾತೆಗಳಲ್ಲಿ ಕೆಲ ಬದಲಾವಣೆ : ರಾಜ್ಯಪಾರಿಂದ ಹಸಿರು ನಿಶಾನೆ - Karavali Times ನೂತನ ಸಚಿವರಿಗೆ ಖಾತೆ ಹಂಚಿಕೆ ಜೊತೆಗೆ ಸಚಿವರ ಖಾತೆಗಳಲ್ಲಿ ಕೆಲ ಬದಲಾವಣೆ : ರಾಜ್ಯಪಾರಿಂದ ಹಸಿರು ನಿಶಾನೆ - Karavali Times

728x90

20 January 2021

ನೂತನ ಸಚಿವರಿಗೆ ಖಾತೆ ಹಂಚಿಕೆ ಜೊತೆಗೆ ಸಚಿವರ ಖಾತೆಗಳಲ್ಲಿ ಕೆಲ ಬದಲಾವಣೆ : ರಾಜ್ಯಪಾರಿಂದ ಹಸಿರು ನಿಶಾನೆ

ಬೆಂಗಳೂರು, ಜ 21, 2021 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಸಚಿವರ ಖಾತೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿ ಹಾಗೂ ಇರುವ ಸಂಚಿವರುಗಳ ಖಾತೆ ಬದಲಿಸಿ ರಾಜಭವನಕ್ಕೆ ಪಟ್ಟಿ ಕಳುಹಿಸಿಕೊಡಲಾಗಿದ್ದು ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ನೂತನ ಸಚಿವರುಗಳ ಖಾತೆ ಹಂಚಿಕೆ ಈ ರೀತಿ ಇದೆ : ಸಿ.ಪಿ. ಯೋಗೇಶ್ವರ್-ಸಣ್ಣ ನೀರಾವರಿ, ಆರ್. ಶಂಕರ್-ಪೌರಾಡಳಿತ ಎಂಟಿಬಿ ನಾಗರಾಜ್- ಅಬಕಾರಿ ಮುರುಗೇಶ್ ನಿರಾಣಿ - ಖನಿಜ, ಗಣಿ ಮತ್ತು ಭೂ ವಿಜ್ಞಾನ ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ ಎಸ್. ಅಂಗಾರ - ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಅರವಿಂದ ಲಿಂಬಾವಳಿ - ಅರಣ್ಯ ನಾರಾಯಣಗೌಡ - ಯುವಜನ ಮತ್ತು ಕ್ರೀಡೆ ಸಿ. ಗೋಪಾಲಯ್ಯ - ತೋಟಗಾರಿಕೆ ಇಲಾಖೆ ಆನಂದ್ ಸಿಂಗ್ - ಪ್ರವಾಸೋದ್ಯಮ ಶಿವರಾಂ ಹೆಬ್ಬಾರ್ - ಕಾರ್ಮಿಕ ಪ್ರಭು ಚವ್ಹಾಣ್ - ಪಶುಸಂಗೋಪನೆ ಕೆ. ಸುಧಾಕರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬಸವರಾಜ ಬೊಮ್ಮಾಯಿ - ಗೃಹ ಮತ್ತು ಕಾನೂನು ಜೆ.ಸಿ. ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ ಸಿ.ಸಿ. ಪಾಟೀಲ್ - ಸಣ್ಣ ಕೈಗಾರಿಕೆ ಕೋಟ ಶ್ರೀನಿವಾಸ ಪೂಜಾರಿ - ಮುಜರಾಯಿ ಸಚಿವ ಮಾಧುಸ್ವಾಮಿಯವರ ಕಾನೂನು ಖಾತೆ ಹಿಂಪಡೆಯಲಾಗಿದ್ದು, ಇದನ್ನು ಹೆಚ್ಚುವರಿಯಾಗಿ ಗೃಹ ಸಚಿವ ಬಸವಜರಾಜ ಬೊಮ್ಮಾಯಿಗೆ ನೀಡಲಾಗಿದೆ. ಕೆ. ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆ ವಾಪಾಸು ಪಡೆಯಲಾಗಿದ್ದು, ಇದನ್ನು ಮಾಧುಸ್ವಾಮಿಗೆ ನೀಡಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ನೂತನ ಸಚಿವರಿಗೆ ಖಾತೆ ಹಂಚಿಕೆ ಜೊತೆಗೆ ಸಚಿವರ ಖಾತೆಗಳಲ್ಲಿ ಕೆಲ ಬದಲಾವಣೆ : ರಾಜ್ಯಪಾರಿಂದ ಹಸಿರು ನಿಶಾನೆ Rating: 5 Reviewed By: karavali Times
Scroll to Top