ಫೆಬ್ರವರಿ 22 ರಿಂದ 6-8ನೇ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ - Karavali Times ಫೆಬ್ರವರಿ 22 ರಿಂದ 6-8ನೇ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ - Karavali Times

728x90

15 February 2021

ಫೆಬ್ರವರಿ 22 ರಿಂದ 6-8ನೇ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ

ಬೆಂಗಳೂರು, ಫೆ. 16, 2021 (ಕರಾವಳಿ ಟೈಮ್ಸ್) : ಬೆಂಗಳೂರು ಮತ್ತು ಕೇರಳ ಗಡಿ ಭಾಗದ ಶಾಲೆಗಳನ್ನು ಹೊರತು ಪಡಿಸಿ, ರಾಜ್ಯಾದ್ಯಂತ ಫೆಬ್ರವರಿ 22 ರಿಂದ 6 ರಿಂದ 8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರು ವಿಧಾನಸೌಧದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6, 7 ಮತ್ತು 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ತೆರೆಯಲಿವೆ, ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಶಾಲೆಗಳಲ್ಲಿ ಕೇವಲ 8ನೇ ತರಗತಿ ಮಾತ್ರ ಆರಂಭವಾಗಲಿದೆ ಎಂದರು. 1 ರಿಂದ 5ನೇ ತರಗತಿಯವರೆಗೆ ವಿದ್ಯಾಗಮ ಯೋಜನೆ ಆರಂಭಿಸುವ ಸಂಬಂಧ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದ ಸಚಿವರು ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ, ರಾಜ್ಯದಲ್ಲಿ ಎರಡನೇ ಹಂತದ ಕೋವಿಡ್ ಅಲೆಯಿರುವ ಸಾಧ್ಯತೆಯಿರುವ ಕಾರಣ, ಬೆಂಗಳೂರು ಮತ್ತು ಕೇರಳ ಗಡಿಯಲ್ಲಿ 6 ಮತ್ತು 7ನೇ ತರಗತಿಗಳು ಆರಂಭವಾಗುವುದಿಲ್ಲ, 8ನೇ ತರಗತಿಗಳು ಮಾತ್ರ ಆರಂಭವಾಗಲಿವೆ ಎಂದು ಸಚಿವರು ತಿಳಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 22 ರಿಂದ 6-8ನೇ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ Rating: 5 Reviewed By: karavali Times
Scroll to Top