ಭಾರತೀಯ ಸ್ಪಿನ್ನರ್ ಗಳ ಆಕ್ರಮಣಕ್ಕೆ ಬೆದರಿದ ಆಂಗ್ಲರು : 317 ರನ್‍ಗಳಿಂದ ದ್ವಿತೀಯ ಟೆಸ್ಟ್ ಜಯಿಸಿ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ - Karavali Times ಭಾರತೀಯ ಸ್ಪಿನ್ನರ್ ಗಳ ಆಕ್ರಮಣಕ್ಕೆ ಬೆದರಿದ ಆಂಗ್ಲರು : 317 ರನ್‍ಗಳಿಂದ ದ್ವಿತೀಯ ಟೆಸ್ಟ್ ಜಯಿಸಿ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ - Karavali Times

728x90

15 February 2021

ಭಾರತೀಯ ಸ್ಪಿನ್ನರ್ ಗಳ ಆಕ್ರಮಣಕ್ಕೆ ಬೆದರಿದ ಆಂಗ್ಲರು : 317 ರನ್‍ಗಳಿಂದ ದ್ವಿತೀಯ ಟೆಸ್ಟ್ ಜಯಿಸಿ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ

ಚೆನ್ನೈ, ಫೆ. 16, 2021 (ಕರಾವಳಿ ಟೈಮ್ಸ್) : ಭಾರತೀಯ ಸ್ಪಿನ್ನರ್‍ ಗಳ ಆಕ್ರಮಣಕ್ಕೆ ಬೆದರಿದ ಇಂಗ್ಲಂಡ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಸುಲಭವಾಗಿ ಟೀಂ ಇಂಡಿಯಾಕ್ಕೆ ಶರಣಾಗಿದೆ. ಈ ಮೂಲಕ ಪ್ರಥಮ ಟೆಸ್ಟ್ ಪಂದ್ಯದ ಸೋಲಿಗೆ ಭಾರತ ಸೇಡು ತೀರಿಸುವ ಮೂಲಕ ಇದೀಗ 4 ಪಂದ್ಯಗಳ ಟೆಸ್ಟ್ ಸರಣಿ 1-1 ರಲ್ಲಿ ಸಮಗೊಂಡಿದೆ. ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 317 ರನ್‍ಗಳಿಂದ ಶರಣಾಯಿತು. ಗೆಲ್ಲಲು 482 ರನ್‍ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ನಾಲ್ಕನೇ ದಿನವಾದ ಮಂಗಳವಾರ ಸ್ಪಿನ್ನರ್‍ಗಳ ಬಿಗಿಯಾದ ದಾಳಿಗೆ ಪರದಾಟ ನಡೆಸಿ 54.2 ಓವರ್‍ಗಳಲ್ಲಿ ಕೇವಲ 164 ರನ್‍ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದ್ದ ಇಂಗ್ಲೆಂಡ್ ಇಂದು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 26 ರನ್ ಗಳಿಸಿದ್ದ ಡಾನ್ ಲಾರೆನ್ಸ್ ಸ್ಟಂಪ್ ಔಟಾದರು. ನಾಯಕ ಜೋ ರೂಟ್ 33 ರನ್ (92 ಎಸೆತ, 3 ಬೌಂಡರಿ) ಹೊಡೆದರೆ ಕೊನೆಯಲ್ಲಿ ಮೋಯಿನ್ ಆಲಿ ಕೊಂಚ ಸಿಡಿದರು. ಸಿಕ್ಸರ್, ಬೌಂಡರಿ ಸಿಡಿಸಿ ಮುನ್ನುಗುತ್ತಿದ್ದ ಮೊಯಿನ್ ಆಲಿ 43 ರನ್ (18 ಎಸೆತ, 3 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಕುಲದೀಪ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಈ ಮೂಲಕ ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. ಭಾರತದ ಪರವಾಗಿ ಅಕ್ಷರ್ ಪಟೇಲ್ 5 ವಿಕೆಟ್ ಪಡೆದರೆ ಅಶ್ವಿನ್ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 329ಗಳಿಗೆ ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 286 ರನ್‍ಗಳಿಗೆ ಅಲೌಟ್ ಆದರೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ 134 ರನ್ ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 164 ರನ್‍ಗಳಿಗೆ ಸರ್ವ ಪತನ ಕಂಡಿದೆ.
  • Blogger Comments
  • Facebook Comments

0 comments:

Post a Comment

Item Reviewed: ಭಾರತೀಯ ಸ್ಪಿನ್ನರ್ ಗಳ ಆಕ್ರಮಣಕ್ಕೆ ಬೆದರಿದ ಆಂಗ್ಲರು : 317 ರನ್‍ಗಳಿಂದ ದ್ವಿತೀಯ ಟೆಸ್ಟ್ ಜಯಿಸಿ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ Rating: 5 Reviewed By: karavali Times
Scroll to Top