ಟೀಂ ಇಂಡಿಯಾಗೆ ಹೀನಾಯ ಸೋಲು : ಚೆನ್ನೈ ಟೆಸ್ಟ್ 227 ರನ್‍ಗಳಿಂದ ಗೆದ್ದುಕೊಂಡ ಇಂಗ್ಲಿಷರು - Karavali Times ಟೀಂ ಇಂಡಿಯಾಗೆ ಹೀನಾಯ ಸೋಲು : ಚೆನ್ನೈ ಟೆಸ್ಟ್ 227 ರನ್‍ಗಳಿಂದ ಗೆದ್ದುಕೊಂಡ ಇಂಗ್ಲಿಷರು - Karavali Times

728x90

9 February 2021

ಟೀಂ ಇಂಡಿಯಾಗೆ ಹೀನಾಯ ಸೋಲು : ಚೆನ್ನೈ ಟೆಸ್ಟ್ 227 ರನ್‍ಗಳಿಂದ ಗೆದ್ದುಕೊಂಡ ಇಂಗ್ಲಿಷರು

ಚೆನ್ನೈ, ಫೆ. 09, 2021 (ಕರಾವಳಿ ಟೈಮ್ಸ್) : ಇಲ್ಲಿನ ಎಂಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 227 ರನ್‍ಗಳ ಅಂತರದಿಂದ ಹೀನಾಯ ಸೋಲುಂಡಿದೆ. ಇಂಗ್ಲೆಂಡ್ ನಿಗದಿಪಡಿಸಿದ್ದ 420 ರನ್‍ಗಳ ಗುರಿ ಬೆನ್ನತ್ತಿದ ಭಾರತ ತಂಡ 192 ರನ್‍ಗಳಿಗೆ ಆಲೌಟ್ ಆಗಿ ಸೋಲುವ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 39 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ, ಇಂದು ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡರ್ಸನ್ ಬೌಲಿಂಗ್ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ಶುಭ್‍ಮನ್ ಗಿಲ್ (50) ಮತ್ತು ನಾಯಕ ವಿರಾಟ್ ಕೊಹ್ಲಿ (72) ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಕೂಡ ದಿಟ್ಟ ಪ್ರದರ್ಶನ ತೋರುವಲ್ಲಿ ವಿಫಲರಾದರು. ದಿನದಾಟದ ಆರಂಭದಲ್ಲೇ 15 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ಅವರನ್ನು ಜಾಕ್ ಲೀಚ್ ಔಟ್ ಮಾಡಿದರು. ಬಳಿಕ ಗಿಲ್ ಜೊತೆಗೂಡಿದ ನಾಯಕ ಕೊಹ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಮತ್ತೊಂದು ಬದಿಯಲ್ಲಿ ಕ್ರೀಸ್‍ನಲ್ಲಿ ಗಟ್ಟಿಯಾಗಿ ನಿಂತು ಆಡಿ ಅರ್ಧಶತಕ ಗಳಿಸಿದ್ದ ಶುಭ್‍ಮನ್ ಗಿಲ್ ಅವರನ್ನು ಜೇಮ್ಸ್ ಆಂಡರ್ಸನ್ ಔಟ್ ಮಾಡಿದರು. ಇದರೊಂದಿಗೆ ಭಾರತ ಒತ್ತಡಕ್ಕೆ ಸಿಲುಕಿತು. ರಹಾನೆ ಅವರನ್ನೂ ಕೂಡ ಆಂಡರ್ಸನ್ ಔಟ್ ಮಾಡುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ಬಳಿಕ ಕ್ರೀಸ್‍ಗೆ ಬಂದ ರಿಶಬ್ ಪಂಥ್ ಕೇವಲ 11 ರನ್ ಗಳಿಸಿ ಆಂಡರ್ಸನ್ ಬೌಲಿಂಗ್‍ನಲ್ಲಿ ರೂಟ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ವಾಷಿಂಗ್ಟನ್ ಸುಂದರ್ ಶೂನ್ಯಕ್ಕೆ ಔಟಾದರು. ಕೊಹ್ಲಿ-ಅಶ್ವಿನ್ ಜೋಡಿ ಕೊಂಚ ಮಟ್ಟಿನ ಪ್ರತಿರೋಧ ತೋರಿದರಾರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಕೊಹ್ಲಿ-ಅಶ್ವಿನ್ ಜೋಡಿ 7ನೇ ವಿಕೆಟ್‍ಗೆ 54 ರನ್‍ಗಳ ಜೊತೆಯಾಟ ನೀಡಿತು. 9 ರನ್ ಗಳಿಸಿದ್ದ ಅಶ್ವಿನ್‍ರನ್ನು ಜಾಕ್ ಲೀಚ್ ಔಟ್ ಮಾಡಿದರು. 72 ರನ್ ಗಳಿಸಿದ್ದ ನಾಯಕ ಕೊಹ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆದರು. ಶಾಬಾಜ್ ನದೀಂ ಶೂನ್ಯ ಸುತ್ತಿದರು. ಜಸ್‍ಪ್ರೀತ್ ಬುಮ್ರಾ 4 ರನ್ ಗಳಿಸಿ ಜೋಫ್ರಾ ಆರ್ಚರ್‍ಗೆ ವಿಕೆಟ್ ಒಪ್ಪಿಸಿದರು. 5 ರನ್ ಗಳಿಸಿದ್ದ ಇಶಾಂತ್ ಶರ್ಮಾ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 4 ವಿಕೆಟ್ ಪಡೆದರೆ, ಜೇಮ್ಸ್ ಆಂಡರ್‍ಸನ್ 3 ವಿಕೆಟ್ ಪಡೆದರು. ಜೋಫ್ರಾ ಆರ್ಚರ್, ಡಾಮ್ ಬೆಸ್, ಬೆನ್ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‍ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
  • Blogger Comments
  • Facebook Comments

0 comments:

Post a Comment

Item Reviewed: ಟೀಂ ಇಂಡಿಯಾಗೆ ಹೀನಾಯ ಸೋಲು : ಚೆನ್ನೈ ಟೆಸ್ಟ್ 227 ರನ್‍ಗಳಿಂದ ಗೆದ್ದುಕೊಂಡ ಇಂಗ್ಲಿಷರು Rating: 5 Reviewed By: karavali Times
Scroll to Top