ಶೈಕ್ಷಣಿಕ ಸಮಯ ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ ಕಡಿತ : ಸಚಿವ ಸುರೇಶ್ ಕುಮಾರ್ - Karavali Times ಶೈಕ್ಷಣಿಕ ಸಮಯ ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ ಕಡಿತ : ಸಚಿವ ಸುರೇಶ್ ಕುಮಾರ್ - Karavali Times

728x90

9 February 2021

ಶೈಕ್ಷಣಿಕ ಸಮಯ ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ ಕಡಿತ : ಸಚಿವ ಸುರೇಶ್ ಕುಮಾರ್

ಬೆಳಗಾವಿ, ಫೆ. 10, 2021 (ಕರಾವಳಿ ಟೈಮ್ಸ್) : ಕಳೆದ ಶೈಕ್ಷಣಿಕ ವರ್ಷವನ್ನು ಕೊರೋನಾ ವೈರಸ್ ಹಾಗೂ ಲಾಕ್‍ಡೌನ್ ನುಂಗಿ ಹಾಕಿದ್ದು, ಶಾಲಾ ವಾರ್ಷಿಕ ಅವಧಿ ಕಡಿತವಾಗಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಬೇಸಿಗೆ ರಜೆ ಕಡಿತ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಬೇಸಿಗೆ ರಜೆ ದಿನಗಳನ್ನು ಕಡಿತ ಮಾಡಲಾಗುವುದು. ಕÀಳೆದು ಹೋದ ಶೈಕ್ಷಣಿಕ ಸಮಯವನ್ನು ಸರಿದೂಗಿಸಲು ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಳಂಬವಾಗುವುದನ್ನು ತಡೆಯಲು, ಶಿಕ್ಷಣ ಇಲಾಖೆಯು ರಜಾದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಯೋಜನೆಯನ್ನು ರೂಪಿಸುತ್ತಿದೆ ಎಂದರು. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಕಾಲಕ್ಕೆ ಶಾಲಾ, ಕಾಲೇಜು ಪ್ರಾರಂಭ ಮಾಡದೆ ಇರುವುದರಿಂದ ಶಿಕ್ಷಣದಿಂದ ಮಕ್ಕಳು ದೂರ ಸರಿಯುತ್ತಿದ್ದಾರೆ. ಅಲ್ಲದೆ ಬಾಲ್ಯ ವಿವಾಹದ ಸಂಖ್ಯೆಯು ಹೆಚ್ಚಳವಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಪರೀಕ್ಷೆಗಳು ಜೂನ್‍ನಲ್ಲಿ ಕೊನೆಗೊಳ್ಳುತ್ತವೆ ಮತ್ತು ಮುಂದಿನ ಶೈಕ್ಷಣಿಕ ವರ್ಷವು ಜುಲೈ ಆರಂಭದಲ್ಲಿ ಪ್ರಾರಂಭವಾಗುವುದರಿಂದ, ಬೇಸಿಗೆ ರಜಾದಿನಗಳನ್ನು ಕಡಿತ ಮಾಡಲಾಗುವುದು. ಆದರೆ ರದ್ದುಗೊಳಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಶೈಕ್ಷಣಿಕ ಸಮಯ ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ ಕಡಿತ : ಸಚಿವ ಸುರೇಶ್ ಕುಮಾರ್ Rating: 5 Reviewed By: karavali Times
Scroll to Top