ದೆಹಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಾಟ : ಪ್ರಮುಖ ಆರೋಪಿ ನಟ ದೀಪ್ ಸಿಧು ಬಂಧಿಸಿದ ದೆಹಲಿ ಪೊಲೀಸ್ - Karavali Times ದೆಹಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಾಟ : ಪ್ರಮುಖ ಆರೋಪಿ ನಟ ದೀಪ್ ಸಿಧು ಬಂಧಿಸಿದ ದೆಹಲಿ ಪೊಲೀಸ್ - Karavali Times

728x90

8 February 2021

ದೆಹಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಾಟ : ಪ್ರಮುಖ ಆರೋಪಿ ನಟ ದೀಪ್ ಸಿಧು ಬಂಧಿಸಿದ ದೆಹಲಿ ಪೊಲೀಸ್

ನವದೆಹಲಿ, ಫೆ. 09, 2021 (ಕರಾವಳಿ ಟೈಮ್ಸ್) : ದೆಹಲಿಯ ಕೆಂಪು ಕೋಟೆಯಲ್ಲಿ ಜನವರಿ 26 ರಂದು ರೈತರ ಪ್ರತಿಭಟನೆ ವೇಳೆ ಸಿಖ್ ಧ್ವಜ ಹಾರಿಸಿ ದಿಕ್ಕು ತಪ್ಪಿಸಲು ಯತ್ನಿಸಿದ ಆರೋಪದಲ್ಲಿ ಪ್ರಮುಖ ಆರೋಪಿ ಎನಿಸಿದ್ದ ಪಂಜಾಬಿ ನಟ ದೀಪ್ ಸಿಧುವನ್ನು ಮಂಗಳವಾರ ದೆಹಲಿ ಪೆÇಲೀಸರು ಬಂಧಿಸಿದ್ದಾರೆ. ಕಳೆದ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ಕೆಂಪು ಕೋಟೆ ಮೇಲೆ ಏರಿ ಸಿಖ್ ಧ್ವಜ ಹಾರಿಸಿ ಗೊಂದಲ ಎಬ್ಬಿಸಿ, ಗಲಭೆಗೆ ಪ್ರೇರೇಪಿಸಿದ್ದ ಎಂಬ ಆರೋಪ ದೀಪ್ ಸಿಧು ಮೇಲೆ ಕೇಳಿಬಂದಿತ್ತು. ಘಟನೆ ಬಳಿಕ ಕೆಂಪು ಕೋಟೆ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವೊಂದು ಹಿಂಸಾಚಾರ ಪ್ರಕರಣಗಳೂ ವರದಿಯಾಗಿತ್ತು. ಹಲವರಿಗೆ ಗಾಯಗಳಾಗಿದ್ದಲ್ಲದೆ ಸಾಕಷ್ಟು ಆಸ್ತಿಪಾಸ್ತಿಗಳು ಹಾನಿಗೀಡಾಗಿದ್ದವು. ಬಳಿಕ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದ. ದೆಹಲಿ ಪೆÇಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ್ದರು. ಇದೀಗ 14 ದಿನಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೀಪ್ ಸಿಧು ಬಿಜೆಪಿ ಪರ ಎಂಬ ಬಗ್ಗೆ ಕೆಲವೊಂದು ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಜೊತೆ ನಿಂತುಕೊಂಡಿದ್ದ ಫೆÇೀಟೋ ಕೂಡಾ ಇದರಲ್ಲಿ ಸೇರಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಈತ ಬಿಜೆಪಿ ಸಂಸದ ನಟ ಸನ್ನಿ ಡಿಯೋಲ್ ಪರ ಪ್ರಚಾರದ ಮ್ಯಾನೇಜರ್ ಆಗಿದ್ದ ಎನ್ನಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ದೆಹಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಾಟ : ಪ್ರಮುಖ ಆರೋಪಿ ನಟ ದೀಪ್ ಸಿಧು ಬಂಧಿಸಿದ ದೆಹಲಿ ಪೊಲೀಸ್ Rating: 5 Reviewed By: karavali Times
Scroll to Top