ನರಿಮೊಗರು : ಗೂಡಂಗಡಿ ತೆರವು ಕಾರ್ಯಾಚರಣೆಗೆ ಡಿವೈಎಫ್‍ಐ ಮುಕ್ವೆ ಘಟಕ ವಿರೋಧ - Karavali Times ನರಿಮೊಗರು : ಗೂಡಂಗಡಿ ತೆರವು ಕಾರ್ಯಾಚರಣೆಗೆ ಡಿವೈಎಫ್‍ಐ ಮುಕ್ವೆ ಘಟಕ ವಿರೋಧ - Karavali Times

728x90

5 February 2021

ನರಿಮೊಗರು : ಗೂಡಂಗಡಿ ತೆರವು ಕಾರ್ಯಾಚರಣೆಗೆ ಡಿವೈಎಫ್‍ಐ ಮುಕ್ವೆ ಘಟಕ ವಿರೋಧ

ಪುತ್ತೂರು, ಫೆ 06, 2021 (ಕರಾವಳಿ ಟೈಮ್ಸ್) : ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ-ಪುರುಷರಕಟ್ಟೆ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತ್ ವತಿಯಿಂದ ಕದ ನಂಬ್ರ ಹಾಗೂ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಪಡೆದು ವ್ಯಾಪಾರ ನಡೆಸುತ್ತಿದ್ದ ಬಡ ವ್ಯಾಪಾರಿಗಳ ಗೂಡಂಗಡಿಗಳನ್ನು ತೆರವುಗೊಳಿಸಿದ ಲೋಕೋಪಯೋಗಿ ಇಲಾಖೆ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾ ಪಂ ಪಿಡಿಒ ಅವರ ಕ್ರಮವನ್ನು ಡಿವೈಎಫ್‍ಐ ಮುಕ್ವೆ ಘಟಕ ಖಂಡಿಸಿದೆ. ಅಂಗಡಿ ತೆರವು ಕಾರ್ಯಾಚರಣೆ ವೇಳೆಯಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ ಸಿ ರೋಡ್, ಸಿಐಟಿಯು ಕಾರ್ಯದರ್ಶಿ ರಾಮಣ್ಣ ವಿಟ್ಲ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಡಿವೈಎಫ್‍ಐ ಸ್ಥಳೀಯ ಘಟಕ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ಅಧಿಕಾರಿಗಳು ಹಾಗೂ ಡಿವೈಎಫ್‍ಐ ಮುಖಂಡರ ನಡುವೆ ಮಾತಿನ ಚಕಮಕಿಯೂ ನಡೆದಿದೆ ಈ ಸಂದರ್ಭ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕೊರೊನಾ ಸಂಕಷ್ಟದ ನಂತರ ಬದುಕಲು ಕಷ್ಟ ಪಡುತ್ತಿರುವ ವ್ಯಾಪಾರಿಗಳನ್ನು ಅಧಿಕಾರಿಗಳ ಈ ಅಮಾನವೀಯ ಕ್ರಮ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಕೆಲ ಶ್ರೀಮಂತರ ಒತ್ತಡಕ್ಕೆ ಮಣಿದು ಇಲ್ಲಿ ಅಧಿಕಾರಿಗಳು ಬಡವರ ಅಂಗಡಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ತಕ್ಷಣ ಸ್ಥಳೀಯ ಗ್ರಾಮ ಪಂಚಾಯತ್ ಸಂತ್ರಸ್ತ ಅಂಗಡಿ ಮಾಲಕರಿಗೆ ಪರಿಹಾರ ನೀಡಬೇಕು ಹಾಗೂ ವ್ಯಾಪಾರಕ್ಕೆ ಪರ್ಯಾಯ ಸ್ಥಳ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಡಿವೈಎಫ್‍ಐ ಮುಕ್ವೆ ಘಟಕದ ಅಧ್ಯಕ್ಷ ಬಾರಿಕ್ ಮುಕ್ವೆ, ಕಾರ್ಯದರ್ಶಿ ಸಫ್ವಾನ್ ಮೊಯ್ದಿನ್, ಸಿದ್ದೀಕ್ ಮುಕ್ವೆ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ನರಿಮೊಗರು : ಗೂಡಂಗಡಿ ತೆರವು ಕಾರ್ಯಾಚರಣೆಗೆ ಡಿವೈಎಫ್‍ಐ ಮುಕ್ವೆ ಘಟಕ ವಿರೋಧ Rating: 5 Reviewed By: karavali Times
Scroll to Top