ಗುಂಡು ಹಾರಿಸಿ ದಾಂಧಲೆ ನಡೆಸಿದ 3 ಮಂದಿ ಡಿ ಗ್ಯಾಂಗ್ ಆರೋಪಿಗಳ ಬಂಧಿಸಿದ ವಿಟ್ಲ ಪೊಲೀಸ್ - Karavali Times ಗುಂಡು ಹಾರಿಸಿ ದಾಂಧಲೆ ನಡೆಸಿದ 3 ಮಂದಿ ಡಿ ಗ್ಯಾಂಗ್ ಆರೋಪಿಗಳ ಬಂಧಿಸಿದ ವಿಟ್ಲ ಪೊಲೀಸ್ - Karavali Times

728x90

26 March 2021

ಗುಂಡು ಹಾರಿಸಿ ದಾಂಧಲೆ ನಡೆಸಿದ 3 ಮಂದಿ ಡಿ ಗ್ಯಾಂಗ್ ಆರೋಪಿಗಳ ಬಂಧಿಸಿದ ವಿಟ್ಲ ಪೊಲೀಸ್


ಬಂಟ್ವಾಳ, ಮಾ. 26, 2021 (ಕರಾವಳಿ ಟೈಮ್ಸ್) : ಕೇರಳದಲ್ಲಿ ಪಿಸ್ತೂಲ್ ಜೊತೆಗಿಟ್ಟುಕೊಂಡು ದಾಂಧಲೆ ನಡೆಸಿದ ಯುವಕರ ಗುಂಪು ಬಳಿಕ ವಿಟ್ಲದಲ್ಲೂ ರಾದ್ದಾಂತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಆರೋಪಿಗಳಾದ ಮೊಹಮ್ಮದ್ ಶಾಕೀರ್, ಅಬ್ದುಲ್ ಲತೀಫ್ ಹಾಗೂ ಅಶ್ಫಾಕ್ ಎಂಬವರನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. 

ಕೇರಳ ರಾಜ್ಯದ ಕಾಸರಗೋಡು, ಪೈವಳಿಕೆ ಹಾಗೂ ಮೀಯಪದವು ಪ್ರದೇಶಗಳಲ್ಲಿ ತಮ್ಮನ್ನು ಡಿ ಗ್ಯಾಂಗ್ ಎಂದು ಗುರುತಿಸಿಕೊಂಡಿದ್ದ ಯುವಕರ ಗುಂಪೆÇಂದು ತಮ್ಮ ಬಳಿ ಪಿಸ್ತೂಲ್‍ಗಳನ್ನು ಇಟ್ಟುಕೊಂಡು ಸಂಚರಿಸುತ್ತಿದ್ದರು.  ಯುವಕರು ಪಿಸ್ತೂಲನ್ನು ಪ್ರದರ್ಶಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಈ ಬಗ್ಗೆ ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇದೇ ಯುವಕರ ತಂಡ ಗುರುವಾರ ರಾತ್ರಿ ಮಂಜೇಶ್ವರ ಸಮೀಪದ ಉಪ್ಪಳದ ಬಾರ್‍ವೊಂದರಲ್ಲಿ ದಾಂಧಲೆ ನಡೆಸಿ ಗುಂಡು ಹಾರಿಸಿ ಪರಾರಿಯಾಗಿದ್ದಲ್ಲದೆ ಅಲ್ಲಿಂದ ಮೀಯಪದವು ಎಂಬಲ್ಲಿ ಪೆÇಲೀಸರು  ಕಾರ್ಯಾಚರಣೆ ನಡೆಸುವಾಗ ಪೆÇಲೀಸರ ಮೇಲೆ ಗುಂಡು ಹಾರಾಟ ನಡೆಸಿ ವಿಟ್ಲ ಕಡೆ ಪರಾರಿಯಾಗಿ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣಾ ಪೆÇಲೀಸರು ತಮ್ಮ ವ್ಯಾಪ್ತಿಯ ಕೇರಳ ಗಡಿಪ್ರದೇಶದ ಕೊಡಂಗೆ ಎಂಬಲ್ಲಿ ಚೆಕ್‍ಪೆÇೀಸ್ಟ್ ತೆರೆದು ತಪಾಸಣೆ ನಡೆಸುತ್ತಿದ್ದಾಗ ಶುಕ್ರವಾರ ಮುಂಜಾನೆ 4 ಗಂಟೆಯ ವೇಳೆಗೆ ಚೆಕ್‍ಪೆÇೀಸ್ಟ್ ಬಳಿ ಒಂದು ಕಾರು ಬಂದು ಒಂದು ಸುತ್ತು ಗುಂಡು ಹಾರಿಸಿ ನಂತರ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ನಿಂತಿದೆ. ಕಾರಿನಲ್ಲಿದ್ದ ದುಷ್ಕರ್ಮಿಗಳು ಕಾರಿನಿಂದ ಇಳಿದು ಓಡುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆರೋಪಿಗಳ ಪೈಕಿ 3 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರಿಂದ ಪೊಲೀಸರು ಒಂದು ಕಾರು, 1 ಪಿಸ್ತೂಲ್, 13 ಸಜೀವ ಗುಂಡುಗಳು, 1 ಡ್ರಾಗರ್ ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಕಲಂ 143, 147, 148, 353, 307 ಜೊತೆಗೆ 149 ಭಾರತೀಯ ದಂಡ ಸಂಹಿತೆ ಹಾಗೂ ಕಲಂ 3 ಜೊತೆಗೆ 25, 27 ಭಾರತೀಯ ಶಸ್ತ್ರ್ತಾಸ್ತ್ರ ಕಾಯ್ದೆ ಹಾಗೂ ಕಲಂ 8(ಎ), (ಸಿ) ಜೊತೆಗೆ  21 (ಬಿ), 22 (ಸಿ) ಎನ್.ಡಿ.ಪಿ.ಎಸ್. ಆಕ್ಟ್ 1985 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಗುಂಡು ಹಾರಿಸಿ ದಾಂಧಲೆ ನಡೆಸಿದ 3 ಮಂದಿ ಡಿ ಗ್ಯಾಂಗ್ ಆರೋಪಿಗಳ ಬಂಧಿಸಿದ ವಿಟ್ಲ ಪೊಲೀಸ್ Rating: 5 Reviewed By: karavali Times
Scroll to Top