ಬಂಟ್ವಾಳ, ಮಾ. 10, 2021 (ಕರಾವಳಿ ಟೈಮ್ಸ್) : ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ-ಭಗವಂತಕೋಡಿ ನಿವಾಸಿ, ಸಂತೆ ವ್ಯಾಪಾರಿ ಹಸೈನಾರ್ ಎಂಬವರ ಮನೆಗೆ ಮಾ 8 ರಂದು ರಾತ್ರಿ ನುಗ್ಗಿದ ಕಳ್ಳರು ನಗ-ನಗದು ಕಳವುಗೈದು ಪರಾರಿಯಾಗಿದ್ದಾರೆ.
ಮಾ. 8 ರಂದು ರಾತ್ರಿ ಹಸೈನಾರ್ ತನ್ನ ಪತ್ನಿ ಜೊತೆ ಸಂಬಂಧಿಕರ ಮನೆಗೆ ಹೋಗಿದ್ದು, ಮನೆಯಲ್ಲಿ ಮಕ್ಕಳು ಹಾಗೂ ಸೊಸೆ ಇದ್ದರು. ಮಾ. 9 ರಂದು ಬೆಳಗ್ಗೆ ಮನೆಯಲ್ಲಿದ್ದ ಮಗ ಕರೆ ಮಾಡಿ ಕಳ್ಳತನ ನಡೆದಿರುವ ಮಾಹಿತಿ ನೀಡಿದ್ದಾನೆ. ತಡರಾತ್ರಿಯಲ್ಲಿ ಮನೆಯ ಹಿಂದಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಪಾಟಿನ ಬೀಗ ಮುರಿದು ಚಿನ್ನಾಭರಣಗಳನ್ನು ಮತ್ತು 35,250ನಗದು ಹಣ ದೋಚಿದ್ದಾರೆ. ಈ ಬಗ್ಗೆ ಹಸೈನಾರ್ ನೀಡಿರುವ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment