ಬಹರೈನ್ ದೇಶದಿಂದ ಮಂಗಳೂರಿಗೆ ಬಂತು ಆಕ್ಸಿಜನ್ ಹೊತ್ತ ಹಡಗು - Karavali Times ಬಹರೈನ್ ದೇಶದಿಂದ ಮಂಗಳೂರಿಗೆ ಬಂತು ಆಕ್ಸಿಜನ್ ಹೊತ್ತ ಹಡಗು - Karavali Times

728x90

5 May 2021

ಬಹರೈನ್ ದೇಶದಿಂದ ಮಂಗಳೂರಿಗೆ ಬಂತು ಆಕ್ಸಿಜನ್ ಹೊತ್ತ ಹಡಗು

ಮಂಗಳೂರು, ಮೇ 05, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನೀಗಿಸುವ ಉದ್ದೇಶದಿಂದ ಬಹರೈನ್ ದೇಶದಿಂದ ಆಕ್ಸಿಜನ್ ಹೊತ್ತ ಹಡಗು ಬುಧವಾರ ಮಂಗಳೂರು ಬಂದರಿಗೆ ಆಗಮಿಸಿದೆ. 

ಬಹರೈನಿನ ಮನಾಮಾ ಬಂದರಿನಿಂದ 40 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತು ನೌಕಾಪಡೆಯ ಐಎನ್‍ಎಸ್ ತಲ್ವಾರ್ ಹೆಸರಿನ ಹಡಗು ನವಮಂಗಳೂರು ಬಂದರಿಗೆ ಬುಧವಾರ ತಲುಪಿದೆ. ಎರಡು ಕ್ರಯೋಜೆನಿಕ್ ಐಸೋ ಕಂಟೇನರ್ ಹೊತ್ತು ತಂದ ಹಡಗಿನಿಂದ ಕಂಟೇನರನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಇಳಿಸಲಾಗಿದೆ. 

20 ಮೆಟ್ರಿಕ್ ಟನ್ ಆಮ್ಲಜನಕ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಪೂರೈಕೆ ಮಾಡಲಾಗುವುದು, ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್ ರಾಜ್ಯದ ವಿವಿಧೆಡೆ ಅಗತ್ಯ ಇರುವಲ್ಲಿಗೆ ಸರಬರಾಜು ಮಾಡಲಾಗುವುದು. ಜೊತೆಗೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ತರಲಾಗಿದೆ. ಭಾರತದೊಂದಿಗೆ ಬಹ್ರೈನ್ ರಾಷ್ಟ್ರ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಹರೈನ್ ದೇಶದಿಂದ ಮಂಗಳೂರಿಗೆ ಬಂತು ಆಕ್ಸಿಜನ್ ಹೊತ್ತ ಹಡಗು Rating: 5 Reviewed By: karavali Times
Scroll to Top