ಜುಲೈ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ದತೆ : ದಿನಾಂಕ ಪ್ರಕಟ ಶೀಘ್ರದಲ್ಲೇ - Karavali Times ಜುಲೈ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ದತೆ : ದಿನಾಂಕ ಪ್ರಕಟ ಶೀಘ್ರದಲ್ಲೇ - Karavali Times

728x90

25 May 2021

ಜುಲೈ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ದತೆ : ದಿನಾಂಕ ಪ್ರಕಟ ಶೀಘ್ರದಲ್ಲೇ

 ಬೆಂಗಳೂರು, ಮೇ 26, 2021 (ಕರಾವಳಿ ಟೈಮ್ಸ್) : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಜುಲೈ ತಿಂಗಳಲ್ಲಿ ನಡೆಸಲು ಸಿದ್ದತೆ ನಡೆಸಲಾಗಿದ್ದು, ದಿನಾಂಕ ನಿಗದಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್ ಸ್ನೇಹಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.  

 ರಾಜ್ಯ ಸರಕಾರದ ನಿಲುವನ್ನು ಕೇಂದ್ರ ಸರಕಾರಕ್ಕೆ ತಿಳಿಸಲಾಗಿದ್ದು, ಅದನ್ನು ಪಿಯು ಬೋರ್ಡ್ ನಿರ್ದೇಶಕಿ ಆರ್ ಸ್ನೇಹಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 ಮೇ. 23 ರಂದು ಹಲವು ರಾಜ್ಯಗಳ ಶಿಕ್ಷಣ ಸಚಿವರು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಬಗ್ಗೆ ಸಭೆ ನಡೆಸಿದ್ದು, ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವಂತೆ ಸಿಬಿಎಸ್'ಸಿ ಸಲಹೆ ನೀಡಿದೆ. ಆದರೆ, ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳಲು 75 ದಿನಗಳ ಅಗತ್ಯವಿದೆ. ಪರೀಕ್ಷೆ ಪಠ್ಯ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆ ಈಗಾಗಲೇ ರಾಜ್ಯದಲ್ಲಿ ಪೂರ್ಣಗೊಂಡಿದೆ. ಈಗ ಮತ್ತೊಮ್ಮೆ ಪಠ್ಯ ಕಡಿತ, ಪ್ರಶ್ನೆಪತ್ರಿಕೆ ಬದಲಾವಣೆ ಮಾಡುವುದು ಕಷ್ಟಕರವಾಗುತ್ತದೆ. ಕೇಂದ್ರದ ಸಲಹೆ, ಸಭೆ ನಂತರ ಪರೀಕ್ಷಾ ಪದ್ಧತಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ. ಕೇಂದ್ರದ ಸಲಹೆ ಹಾಗೂ ಸಭೆ ಬಳಿಕ ಪರೀಕ್ಷಾ ಪದ್ದತಿ ಹಾಗೂ ಪಠ್ಯ ಕಡಿತದ ಬಗ್ಗೆ ಚಿಂತನೆ ಮಾಡಲಾಗಿದೆ. 

ಈಗಾಗಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಜತೆಗೆ ಪಠ್ಯವನ್ನೂ ಸಹ ರೂಪಿಸಲಾಗಿದೆ. ಇದೀಗ ಮತ್ತೆ ಪಠ್ಯ ಕಡಿತ, ಪ್ರಶ್ನೆ ಪತ್ರಿಕೆ ಬದಲಾವಣೆ ಮಾಡುವುದು ಕಷ್ಟವಾಗುತ್ತದೆ ಎಂದಿರುವ ಅವರು, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ನಂತರವೇ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತೆ ಮನವಿ ಮಾಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಲೈ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ದತೆ : ದಿನಾಂಕ ಪ್ರಕಟ ಶೀಘ್ರದಲ್ಲೇ Rating: 5 Reviewed By: karavali Times
Scroll to Top