ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಪರಿಷ್ಕರಣೆ : 11 ಜಿಲ್ಲೆಗಳಲ್ಲಿ ಪೂರ್ಣ ಲಾಕ್ ಡೌನ್ ಯಥಾಸ್ಥಿತಿ, 19 ಜಿಲ್ಲೆಗಳಲ್ಲಿ ಸಡಿಲಿಸಿ ಸೆಮಿ ಲಾಕ್ ಡೌನ್ ಜಾರಿ ಮಾಡಿ ಸಿಎಂ ಆದೇಶ - Karavali Times ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಪರಿಷ್ಕರಣೆ : 11 ಜಿಲ್ಲೆಗಳಲ್ಲಿ ಪೂರ್ಣ ಲಾಕ್ ಡೌನ್ ಯಥಾಸ್ಥಿತಿ, 19 ಜಿಲ್ಲೆಗಳಲ್ಲಿ ಸಡಿಲಿಸಿ ಸೆಮಿ ಲಾಕ್ ಡೌನ್ ಜಾರಿ ಮಾಡಿ ಸಿಎಂ ಆದೇಶ - Karavali Times

728x90

10 June 2021

ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಪರಿಷ್ಕರಣೆ : 11 ಜಿಲ್ಲೆಗಳಲ್ಲಿ ಪೂರ್ಣ ಲಾಕ್ ಡೌನ್ ಯಥಾಸ್ಥಿತಿ, 19 ಜಿಲ್ಲೆಗಳಲ್ಲಿ ಸಡಿಲಿಸಿ ಸೆಮಿ ಲಾಕ್ ಡೌನ್ ಜಾರಿ ಮಾಡಿ ಸಿಎಂ ಆದೇಶ

ಬೆಂಗಳೂರು, ಜೂನ್ 10, 2021 (ಕರಾವಳಿ ಟೈಮ್ಸ್) : ರಾಜ್ಯದ ಲಾಕ್ ಡೌನ್ ನಿರ್ಬಂಧಗಳನ್ನು ಮರು ಪರಿಷ್ಕರಿಸಿ ಸಿಎಂ ಯಡಿಯೂರಪ್ಪ ಗುರುವಾರ ಸಂಜೆ ಅದೇಶ ಹೊರಡಿಸಿದ್ದಾರೆ. ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಿದ ಬಳಿಕ ಸಿಎಂ ಈ ಪರಿಷ್ಕøತ ಆದೇಶ ಹೊರಡಿಸಿದ್ದಾರೆ. 

ಕೋವಿಡ್ ಪ್ರಕರಣ ಇಳಿಕೆ ಆಗದ 11 ಜಿಲ್ಲೆಗಳಲ್ಲಿ ಈಗಿರುವ ಕಠಿನ ಲಾಕ್ ಡೌನ್ ಯಥಾ ಸ್ಥಿತಿ ಮುಂದುವರಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸೂಚಿಸಲಾಗಿದೆ. ಉಳಿದ 19 ಜಿಲ್ಲೆಗಳಲ್ಲಿ ನಿಯಮ ಸಡಿಸಲಾಗಿದ್ದು, ಸೆಮಿ ಲಾಕ್ ಡೌನ್ ಘೋಷಿಸಿ ಸಿಎಂ ಸೂಚಿಸಿದ್ದಾರೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸು ಸಂಚಾರ ಸದ್ಯಕ್ಕೆ ಆರಂಭಿಸುತ್ತಿಲ್ಲ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದ್ದಾರೆ.

ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಬೆಳಗಾವಿ, ಚಾಮರಾಜನಗರ, ಹಾಸನ, ಕೊಡಗು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸದ್ಯ ಜಾರಿಯಲ್ಲಿರುವ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರುಗಳಿಗೆ ಅಧಿಕಾರ ನೀಡಲಾಗಿದೆ. 

ಉಳಿದ ಜಿಲ್ಲೆಗಳಲ್ಲಿ ಜೂನ್ 14 ರ ಸೋಮವಾರ ಬೆಳಿಗ್ಗೆಯಿಂದ ಪರಿಷ್ಕøತ ನಿಯಮಗಳು ಜಾರಿಗೆ ಬರಲಿದೆ. ಇದು ಜೂನ್ 21ರ ಸೋಮವಾರ ಬೆಳಿಗ್ಗೆ 6 ಗಂಟೆ ವರೆಗೆ ಜಾರಿಯಲ್ಲಿರಲಿದ್ದು, ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುದು ಎಂದು ಸಿಎಂ ತಿಳಿಸಿದ್ದಾರೆ. 

ಸೋಂಕು ಕಡಿಮೆಯಾಗಿರುವ ಜಿಲ್ಲೆಗಳಲ್ಲಿ ಪರಿಷ್ಕøತ ನಿಯಮದಂತೆ ಕಾರ್ಖಾನೆಗಳನ್ನು ಶೇ 50 ರಷ್ಟು ಸಿಬ್ಬಂದಿ ಬಳಸಿ ಕಾರ್ಯನಿರ್ವಹಿಸಬಹುದು, ಗಾರ್ಮೆಂಟ್ ಸಂಸ್ಥೆಗಳು ಶೇ 30 ಸಿಬ್ಬಂದಿ ಬಳಸಿ ಕಾರ್ಯನಿರ್ವಹಿಸಬಹುದು. ಎಲ್ಲಾ ಅಂಗಡಿಗಳು ಬೆಳಿಗ್ಗೆ 6 ರಿಂದ 10 ಗಂಟೆಯ ಬದಲಿಗೆ ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಸಿಮೆಂಟ್ ಹಾಗೂ ಸ್ಟೀಲ್ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಟೋ ಹಾಗೂ ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 

ಈ ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ ಹಾಗೂ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿರಲಿದ್ದು, ರಾತ್ರಿ 7 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕಫ್ರ್ಯೂ ಹಾಗೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ವಿವರಿಸಿದರು. 


  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಪರಿಷ್ಕರಣೆ : 11 ಜಿಲ್ಲೆಗಳಲ್ಲಿ ಪೂರ್ಣ ಲಾಕ್ ಡೌನ್ ಯಥಾಸ್ಥಿತಿ, 19 ಜಿಲ್ಲೆಗಳಲ್ಲಿ ಸಡಿಲಿಸಿ ಸೆಮಿ ಲಾಕ್ ಡೌನ್ ಜಾರಿ ಮಾಡಿ ಸಿಎಂ ಆದೇಶ Rating: 5 Reviewed By: karavali Times
Scroll to Top