ನರೇಗಾ ಯೋಜನೆಯ ಸವಲತ್ತುಗಳನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು : ಇಒ ರಾಜಣ್ಣ - Karavali Times ನರೇಗಾ ಯೋಜನೆಯ ಸವಲತ್ತುಗಳನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು : ಇಒ ರಾಜಣ್ಣ - Karavali Times

728x90

25 June 2021

ನರೇಗಾ ಯೋಜನೆಯ ಸವಲತ್ತುಗಳನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು : ಇಒ ರಾಜಣ್ಣ

ಬಂಟ್ವಾಳ, ಜೂನ್ 25, 2021 (ಕರಾವಳಿ ಟೈಮ್ಸ್) : ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವೀಡಿಯೋ ಸಂವಾದದಲ್ಲಿ ನೀಡಿದ ಸೂಚನೆಯಂತೆ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರತಿಗುರಿ ಕಾಲನಿಯ 40ಕ್ಕೂ ಹೆಚ್ಚು ಮನೆಗಳಲ್ಲಿ ಸೋಕ್ ಪಿಟ್ (ಬಚ್ಚಲು ಗುಂಡಿ) ಕಾಮಗಾರಿಗೆ ಬಂಟ್ವಾಳ ತಾ ಪಂ ಕಾರ್ಯನಿರ್ವಹಣಾಧಿಕಾರಿ ಕೆ ರಾಜಣ್ಣ ಅವರು ಚಾಲನೆ ನೀಡಿದರು. 

ಈ ಸಂದರ್ಭ ಮಾತನಾಡಿದ ತಾ ಪಂ ಇಒ ರಾಜಣ್ಣ ಅವರು, ನರೇಗಾ ಯೋಜನೆಯಡಿ ದೊರೆಯುವ ಸವಲತ್ತುಗಳನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು. ಸೋಕ್ ಪಿಟ್ ನಿರ್ಮಾಣದಿಂದ ತ್ಯಾಜ್ಯ ನೀರಿನ ಸಮಸ್ಯೆಗೆ ಕಡಿವಾಣ ಹಾಕಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯ ಎಂದರು. 

ಈ ಸಂದರ್ಭ ತಾ ಪಂ ಪ್ರಭಾರ ಸಹಾಯಕ ನಿರ್ದೇಶಕ ಶಿವಾನಂದ್  ಪೂಜಾರಿ, ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿಗಾರ್, ಉಪಾಧ್ಯಕ್ಷ ಜಯ ಆರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಕಾರ್ಯದರ್ಶಿ ಸಂಜೀವ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. 

 ಕೊರತಿಗುರಿ ಕಾಲನಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 180ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ತ್ಯಾಜ್ಯ ನೀರಿನ ಸಮಸ್ಯೆಯಿಂದ ಜನರು ತೊಂದರೆ ಪಡುತ್ತಿದ್ದರು. ತ್ಯಾಜ್ಯ ನೀರು ವಿಲೇವಾರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಂಚಾಯತ್ ಸದಸ್ಯರು ಮನೆ-ಮನೆಗೆ ಕಾಲನಿಯ ಜನರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸೋಕ್ ಪಿಟ್ ನಿರ್ಮಿಸಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ 40 ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಕಾಮಗಾರಿ ಬೇಡಿಕೆ ಬರುವ ನಿರೀಕ್ಷೆ ಇದೆ.

  • Blogger Comments
  • Facebook Comments

0 comments:

Post a Comment

Item Reviewed: ನರೇಗಾ ಯೋಜನೆಯ ಸವಲತ್ತುಗಳನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು : ಇಒ ರಾಜಣ್ಣ Rating: 5 Reviewed By: karavali Times
Scroll to Top