ಜೂ 23 ರಂದು ಸ್ಟ್ಯಾಂಪ್ ಸಂಗ್ರಹದ ಬಗ್ಗೆ ಮಕ್ಕಳಿಗಾಗಿ ಆನ್ ಲೈನ್ ಸೆಮಿನಾರ್ - Karavali Times ಜೂ 23 ರಂದು ಸ್ಟ್ಯಾಂಪ್ ಸಂಗ್ರಹದ ಬಗ್ಗೆ ಮಕ್ಕಳಿಗಾಗಿ ಆನ್ ಲೈನ್ ಸೆಮಿನಾರ್ - Karavali Times

728x90

18 June 2021

ಜೂ 23 ರಂದು ಸ್ಟ್ಯಾಂಪ್ ಸಂಗ್ರಹದ ಬಗ್ಗೆ ಮಕ್ಕಳಿಗಾಗಿ ಆನ್ ಲೈನ್ ಸೆಮಿನಾರ್

ಮಂಗಳೂರು, ಜೂನ್ 18, 2021 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ವತಿಯಿಂದ 10 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗಾಗಿ ಜೂನ್ 23 ರಂದು ಸಂಜೆ 5 ರಿಂದ 7 ಗಂಟೆಯವರೆಗೆ ಸ್ಟಾಂಪ್ ಸಂಗ್ರಹದ ಬಗ್ಗೆ ಆನ್ ಲೈನ್ ಸೆಮಿನಾರ್ ಹಮ್ಮಿಕೊಂಡಿದೆ. ಆಸಕ್ತ ಮಕ್ಕಳು ತಮ್ಮ ಹೆಸರು, ವಯಸ್ಸು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಇಮೇಲ್ mangaloreho@indiapost.gov.in  ಗೆ ಕಳುಹಿಸಬಹುದು. 

ಸ್ಟಾಂಪ್ ಸಂಗ್ರಹದ ಕುರಿತು ಹವ್ಯಾಸ ಬೆಳೆಸುವ ಬಗ್ಗೆ ಹಾಗೂ ಸ್ಟಾಂಪ್ ಪ್ರದರ್ಶನ ತಯಾರಿ ಬಗ್ಗೆ ಸೆಮಿನಾರಿನಲ್ಲಿ ಮಾಹಿತಿ ನೀಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2441447 ಅಥವಾ 2425694ನ್ನು ಸಂಪರ್ಕಿಸಬಹುದು ಎಂದು ಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜೂ 23 ರಂದು ಸ್ಟ್ಯಾಂಪ್ ಸಂಗ್ರಹದ ಬಗ್ಗೆ ಮಕ್ಕಳಿಗಾಗಿ ಆನ್ ಲೈನ್ ಸೆಮಿನಾರ್ Rating: 5 Reviewed By: karavali Times
Scroll to Top