ಯುವ ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ, ಸಿಎಂ-ಪಿಎಂ ನಿರ್ಧಾರವೂ ನಮ್ಮ ಕೆಲಸವಲ್ಲ, ನಮ್ಮದೇನಿದ್ದರೂ ಪಕ್ಷ ಸಂಘಟನೆ ಉದ್ದೇಶ ಮಾತ್ರ : ರಕ್ಷಾ ರಾಮಯ್ಯ - Karavali Times ಯುವ ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ, ಸಿಎಂ-ಪಿಎಂ ನಿರ್ಧಾರವೂ ನಮ್ಮ ಕೆಲಸವಲ್ಲ, ನಮ್ಮದೇನಿದ್ದರೂ ಪಕ್ಷ ಸಂಘಟನೆ ಉದ್ದೇಶ ಮಾತ್ರ : ರಕ್ಷಾ ರಾಮಯ್ಯ - Karavali Times

728x90

14 July 2021

ಯುವ ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ, ಸಿಎಂ-ಪಿಎಂ ನಿರ್ಧಾರವೂ ನಮ್ಮ ಕೆಲಸವಲ್ಲ, ನಮ್ಮದೇನಿದ್ದರೂ ಪಕ್ಷ ಸಂಘಟನೆ ಉದ್ದೇಶ ಮಾತ್ರ : ರಕ್ಷಾ ರಾಮಯ್ಯಮಂಗಳೂರು, ಜುಲೈ 14, 2021 (ಕರಾವಳಿ ಟೈಮ್ಸ್) : ರಾಜ್ಯ ಯುವ ಕಾಂಗ್ರೆಸ್ ನಾಯಕರು ಅಥವಾ ಕಾರ್ಯರ್ಕರಲ್ಲಿ ಯಾವುದೇ ಬಣಗಳಿಲ್ಲ. ಅಂತಹ ಯಾವುದೇ ಸಂದೇಶಗಳನ್ನು ಪಕ್ಷದ ಕಾರ್ಯಕರ್ತರು ನಂಬಬಾರದು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಹಾಗೂ ಮಹಮ್ಮದ್ ಹ್ಯಾರಿಸ್ ನಲಪಾಡ್ ನಡುವೆ ಯಾವುದೇ ಬಣಗಳಿಲ್ಲ. ಹಿರಿಯ ಕೈ ನಾಯಕರು ಯಾವ ನಿರ್ದೇಶನ ನೀಡುತ್ತಾರೋ ಆ ಪ್ರಕಾರ ಪಕ್ಷ ಮುನ್ನಡೆಸಲು ನಾವಿಬ್ಬರೂ ಬದ್ದರಾಗಿದ್ದೇವೆ. ಅದರಲ್ಲಿ ಯಾವುದೇ ಸಂದೇಹ ಬೇಡ ಎಂದರು. 

ನಲಪಾಡ್ ಅವರೊಂದಿಗೆ ನನ್ನ ಸ್ನೇಹ 12 ವರ್ಷಗಳಷ್ಟು ಹಳೆಯದಾಗಿದ್ದು, ಇನ್ನೂ 20 ವರ್ಷ ಕಳೆದರೂ ನಮ್ಮ ನಡುವಿನ ಸ್ನೇಹ ಯಥಾಸ್ಥಿತಿ ಮುಂದುವರಿಯಲಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದ ತೀರ್ಮಾನ ಆಗುವವರೆಗೂ ಸ್ವಲ್ಪ ಗೊಂದಲ ಇದ್ದದ್ದು ನಿಜ. ಆದರೆ ಹಿರಿಯ ನಾಯಕರು ನಿರ್ಧಾರ ಪ್ರಕಟಿಸಿದ ಬಳಿಕ ಈಗ ಎಲ್ಲವೂ ಸರಿಯಾಗಿದೆ. ಯಾವ ಗೊಂದಲವೂ ಇಲ್ಲ. ಜನವರಿ ನಂತರ ನಲಪಾಡ್ ಅವರು ಯುವ ಕಾಂಗ್ರೆಸ್ ಉಸ್ತುವಾರಿ ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ ರಾಮಯ್ಯ ಇತ್ತೀಚೆಗೆ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಬಾಯಿ ತಪ್ಪಿ ಹೇಳಿರಬೇಕು. ಸಿಎಂ, ಪಿಎಂ ನಿರ್ಧರಿಸುವುದು ಯುವ ಕಾಂಗ್ರೆಸ್ ಕೆಲಸವಲ್ಲ. ನಮ್ಮದೇನಿದ್ದರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸುವುದು ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಪ್ರಮುಖ ಉದ್ದೇಶ ಎಂದವರು ಸಮರ್ಥಿಸಿಕೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಯುವ ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ, ಸಿಎಂ-ಪಿಎಂ ನಿರ್ಧಾರವೂ ನಮ್ಮ ಕೆಲಸವಲ್ಲ, ನಮ್ಮದೇನಿದ್ದರೂ ಪಕ್ಷ ಸಂಘಟನೆ ಉದ್ದೇಶ ಮಾತ್ರ : ರಕ್ಷಾ ರಾಮಯ್ಯ Rating: 5 Reviewed By: karavali Times
Scroll to Top