ಬಂಟ್ವಾಳ, ಜುಲೈ 28, 2021 (ಕರಾವಳಿ ಟೈಮ್ಸ್) : ತಾಲೂಕಿನ ಅರಬಿಗುಡ್ಡೆ ಬಳಿ ಮಂಗಳವಾರ ಅಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಅಶೋಕ ಹಾಗೂ ಪ್ರಯಾಣಿಕ ಮೋಕ್ಷಿತ್ ಗಾಯಗೊಂಡಿದ್ದಾರೆ. ಪುತ್ತೂರು ತಾಲೂಕಿನ ಪುತ್ತೂರು ಕಸ್ಬಾ ಗ್ರಾಮದ ಸಾಮೆತ್ತಡ್ಕ ನಿವಾಸಿ ಅಶೋಕ ಪೂಜಾರಿ ಅವರ ಪುತ್ರ ರೋಹಿತ್ ಹಾಗೂ ಆತನ ಸ್ನೇಹಿತರಾದ ಮೋಕ್ಷಿತ್ ಹಾಗೂ ಸುದೀಪ್ ಪಿರೇರಾ ಜೊತೆಗೂಡಿ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಪತ್ರ ಸಲ್ಲಿಸಲು ಬಿ ಸಿ ರೋಡಿನಿಂದ ಅಟೋ ರಿಕ್ಷಾ ಬಾಡಿಗೆಗೆ ಗೊತ್ತುಪಡಿಸಿ ಪ್ರಯಾಣಿಸುತ್ತಿದ್ದ ವೇಳೆ ಬಿ ಕಸ್ಬಾ ಗ್ರಾಮದ ಅರಬಿಗುಡ್ಡೆ ಬಳಿ ಚಡವಿನಲ್ಲಿ ಚಾಲಕನ ಅಜಾರೂಕತೆಯ ಚಾಲನೆಯಿಂದಾಗಿ ರಿಕ್ಷಾ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅಪಘಾತಕ್ಕೆ ರಿಕ್ಷಾ ಚಾಲಕನ ಅಜಾಗರೂಕತೆಯೇ ಕಾರಣ ಎಂದು ರೋಹಿತ್ ನೀಡಿದ ದೂರಿನಲ್ಲಿ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2021 ಕಲಂ 279, 337 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment