ಕೊನೆಗೂ ವಾರದ ಬಳಿಕ ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ - Karavali Times ಕೊನೆಗೂ ವಾರದ ಬಳಿಕ ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ - Karavali Times

728x90

4 August 2021

ಕೊನೆಗೂ ವಾರದ ಬಳಿಕ ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ

ಬೆಂಗಳೂರು, ಆಗಸ್ಟ್ 04, 2021 (ಕರಾವಳಿ ಟೈಮ್ಸ್) : ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಅಗಿ ಪ್ರಮಾಣ ವಚನ ಸ್ವೀಕರಿಸಿದ ಎಸ್ ಆರ್ ಬೊಮ್ಮಾಯಿ ಕೊನೆಗೂ ವಾರದ ಬಳಿಕ ಅಳೆದು ತೂಗಿ ಮೊದಲ ಹಂತದಲ್ಲಿ 29 ಮಂದಿಯ ಮಂತ್ರಿಮಂಡಲ ಬುಧವಾರ ರಚನೆಗೊಂಡಿದ್ದು, ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 

ಕೆ.ಎಸ್. ಈಶ್ವರಪ್ಪ - ಶಿವಮೊಗ್ಗ, ಆರ್. ಅಶೋಕ್ - ಪದ್ಮನಾಭ ನಗರ, ಡಾ. ಸಿ.ಎನ್. ಅಶ್ವತ್ಥ ನಾರಾಯಣ - ಮಲ್ಲೇಶ್ವರ, ಉಮೇಶ್ ಕತ್ತಿ - ಹುಕ್ಕೇರಿ, ಎಸ್.ಟಿ. ಸೋಮಶೇಖರ್ - ಯಶವಂತಪುರ, ಡಾ. ಕೆ. ಸುಧಾಕರ್ - ಚಿಕ್ಕಬಳ್ಳಾಪುರ, ಬೈರತಿ ಬಸವರಾಜ - ಕೆ ಆರ್ ಪುರಂ, ಮುರುಗೇಶ್ ನಿರಾಣಿ - ಬಿಳಿಗಿ, ಶಿವರಾಂ ಹೆಬ್ಬಾರ್ - ಯಲ್ಲಾಪುರ, ಶಶಿಕಲಾ ಜೊಲ್ಲೆ - ನಿಪ್ಪಾಣಿ, ಕೆ ಸಿ ನಾರಾಯಣ್ ಗೌಡ - ಕೆ ಆರ್ ಪೇಟೆ, ಸುನೀಲ್ ಕುಮಾರ್ - ಕಾರ್ಕಳ, ಅರಗ ಜ್ಞಾನೇಂದ್ರ - ತೀರ್ಥಹಳ್ಳಿ, ಗೋವಿಂದ ಕಾರಜೋಳ-ಮುಧೋಳ. ಮುನಿರತ್ನ -  ಆರ್ ಆರ್ ನಗರ, ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ, ಗೋಪಾಲಯ್ಯ - ಮಹಾಲಕ್ಷ್ಮಿ ಲೇಔಟ್,  ಮಾಧುಸ್ವಾಮಿ - ಚಿಕ್ಕನಾಯಕನಹಳ್ಳಿ, ಹಾಲಪ್ಪ ಆಚಾರ್ - ಯಲ್ಬುರ್ಗ, ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ, ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ, ಪ್ರಭು ಚೌವ್ಹಾಣ್ - ಔರಾದ್, ವಿ ಸೋಮಣ್ಣ - ಗೋವಿಂದ ರಾಜನಗರ, ಎಸ್ ಅಂಗಾರ - ಸುಳ್ಯ, ಆನಂದ್ ಸಿಂಗ್ - ಹೊಸಪೇಟೆ, ಸಿ ಸಿ ಪಾಟೀಲ್ - ನರಗುಂದ, ಬಿ ಸಿ ನಾಗೇಶ್ - ತಿಪಟೂರು, ಬಿ. ಶ್ರೀರಾಮುಲು - ಮೊಳಕಾಲ್ಮೂರು, ಬಿ.ಸಿ. ಪಾಟೀಲ್ - ಹಿರೇಕೆರೂರು ಕ್ಷೇತ್ರದವರಾಗಿದ್ದು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ ಪಿ ಯೋಗೇಶ್ವರ್, ಶಂಕರ್, ಶ್ರೀಮಂತ್ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. 

ಈ ಬಾರಿ ರಾಜ್ಯದ 13 ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ನೀಡಲಾಗಿಲ್ಲ. ಮೈಸೂರು, ಕಲ್ಬುರ್ಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಈ ಬಾರಿ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯ ನೀಡಲಾಗಿಲ್ಲ ಬೆಂಗಳೂರು ನಗರದ 7 ಮಂದಿಗೆ ಸಚಿವ ಸ್ಥಾನ ಅದೃಷ್ಟ ಒದಗಿ ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊನೆಗೂ ವಾರದ ಬಳಿಕ ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ Rating: 5 Reviewed By: karavali Times
Scroll to Top