ಬಂಟ್ವಾಳ, ಆಗಸ್ಟ್ 09, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ ನೂತನ ಅಧ್ಯಕ್ಷರಾಗಿ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ.
ಅಲೆತ್ತೂರು ಮಂಗಳ ಭವನದಲ್ಲಿ ಭಾನುವಾರ ಭಾಸ್ಕರ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ 41ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಸಭೆಯಲ್ಲಿ ಅತಿಥಿಗಳಾಗಿ ಬಿ. ಮೋಹನ್ ಬಿ.ಸಿ.ರೋಡು, ಪುಷ್ಪರಾಜ್ ಶೆಟ್ಟಿ ಪಲ್ಲಮಜಲು, ಮೋನಪ್ಪ ಪೂಜಾರಿ ಅಲೆತ್ತೂರು, ಪರಮೇಶ್ವರ ಶೆಟ್ಟಿ ಚಾವಡಿ ಮನೆ ಅಲೆತ್ತೂರು, ಸತೀಶ್ ಕುಲಾಲ್ ಬಿ.ಸಿ.ರೋಡು ಅವರು ಭಾಗವಹಿಸಿದ್ದರು.
ಉಪಾದ್ಯಕ್ಷರಾಗಿ ನಿತಿನ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಶ್ರೀಧರ ಶೆಟ್ಟಿ, ಸಂಘಟನನಾ ಕಾರ್ಯದರ್ಶಿಯಾಗಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಶಿವರಾಜ್ ಕೊಡಂಗೆ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವಿಶ್ವನಾಥ ರೈ, ಭಾಸ್ಕರ್ ಕುಲಾಲ್, ರಾಜೇಶ್ ಕುಮಾರ್, ತಾರಾನಾಥ್ ಶೆಟ್ಟಿ, ಯಶವಂತ ಶೆಟ್ಟಿ, ರಂಜಿತ್, ಕೀರ್ತಿರಾಜ್, ಗೌತಮ್ ಅವರನ್ನು ಆರಿಸಲಾಯಿತು.
0 comments:
Post a Comment