ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಸಮಾಜದಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಜನರ ಮಧ್ಯೆ ಕಂದಕ ನಿರ್ಮಿಸುವ ವಿಷಮ ಸನ್ನಿವೇಶಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಜಾತಿ ಬೇಧ ಮರೆತು ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟ ಮಹಾನ್ ವ್ಯಕ್ತಿತ್ವಗಳನ್ನು ಇಂದಿನ ಜನಾಂಗ ಮಾದರಿಯಾಗಿಟ್ಟುಕೊಂಡು ಸ್ವಾತಂತ್ರ್ಯದ ಮೌಲ್ಯವನ್ನು ಕಾಪಾಡಿಕೊಂಡು ಬರಬೇಕಾದ ಅನಿವಾರ್ಯತೆ ಇಂದು ಹೆಚ್ಚಾಗಿದೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅಭಿಪ್ರಾಯಪಟ್ಟರು.
ಪಾಣೆಮಂಗಳೂರು ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಾಜಿ ಮುಹಮ್ಮದ್ ನೀಮಾ ಧ್ವಜಾರೋಹಣಗೈದ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಜೆಟಿಟಿ ಅಧ್ಯಕ್ಷತೆ ವಹಿಸಿದ್ದರು. ಗುಡ್ಡೆಅಂಗಡಿ ಎನ್.ಜೆ.ಎಂ. ಅಧ್ಯಕ್ಷ ಮುಹಮ್ಮದ್ ಸಜಿಪ, ಮಾಜಿ ಅಧ್ಯಕ್ಷ ಉಮ್ಮರ್ ಫಾರೂಕ್ ಬೋಗೋಡಿ, ಮಾಜಿ ಕಾರ್ಯದರ್ಶಿಗಳಾದ ಮುಸ್ತಫಾ ಬೋಗೋಡಿ, ಅಬ್ದುಲ್ ಹಮೀದ್ ಗುಡ್ಡೆಅಂಗಡಿ, ಆಲಡ್ಕ ಎಂಜೆಎಂ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಹನೀಫ್ ಹಾಸ್ಕೋ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯ ಇರ್ಶಾದ್ ಗುಡ್ಡೆಅಂಗಡಿ, ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಝ್ವಾನ್ ಅಕ್ಕರಂಗಡಿ, ಬಂಟ್ವಾಳ ಯುವ ಕಾಂಗ್ರೆಸ್ ಪಾಣೆಮಂಗಳೂರು ವಲಯ ಉಸ್ತುವಾರಿ ಶರೀಫ್ ಭೂಯಾ, ಪ್ರಮುಖರಾದ ಪುಷ್ಪಕರ ಮೆಲ್ಕಾರ್, ಗಣೇಶ ಗುಡ್ಡೆಅಂಗಡಿ, ನಿಯಾಝ್ ನಂದಾವರ, ಶರೀಫ್ ಬೋಗೋಡಿ, ಲತೀಫ್ ಹಾಜಿ, ಅಬ್ದುಲ್ಲ ಜಿ.ಎ., ವಿನ್ನಿಫ್ರೆಡ್ ಟೀಚರ್, ಮಜೀದ್ ಬೋಗೋಡಿ, ಹಬೀಬ್ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಕಬೀರ್ ಬಂಗ್ಲೆಗುಡ್ಡೆ, ಹನೀಫ್ ಮೆಲ್ಕಾರ್, ತನ್ವೀರ್ ಮೆಲ್ಕಾರ್, ಜಾಫರ್ ಬೋಗೋಡಿ, ಕೈಫ್ ಬೋಗೋಡಿ, ನಜೀಬ್ ಬೋಗೋಡಿ, ಶಹೀದ್ ಗುಡ್ಡೆಅಂಗಡಿ, ಸಾದಿಕ್ ಮದೀನಾ, ಸೈಫ್ ಗುಡ್ಡೆಅಂಗಡಿ, ಆಬಿದ್ ಬೋಗೋಡಿ, ಸಿರಾಜ್ ಬೋಗೋಡಿ, ಓಲ್ವಿನ್ ಡಿ’ಸೋಜ, ಡೋಲ್ಫಿನ್ ಡಿ’ಸೋಜ, ಝಕರಿಯಾ ಬೋಗೋಡಿ, ಮಜೀದ್ ಬೋಳಂಗಡಿ, ಝಕರಿಯಾ ಗುಡ್ಡೆಅಂಗಡಿ, ಉಮ್ಮರಬ್ಬ ಬೋಗೋಡಿ, ಯಾಕೂಬ್ ಗುಡ್ಡೆಅಂಗಡಿ, ಇಬ್ರಾಹಿಂ ಬೋಗೋಡಿ, ಉಬೈದುಲ್ಲಾ ಬೋಗೋಡಿ, ಶಫೀವುಲ್ಲಾ ಬೋಗೋಡಿ, ರಾಶಿದ್ ಬೋಗೋಡಿ, ಇರ್ಶಾದ್ ಗುಡ್ಡೆಅಂಗಡಿ, ಅಬೂಬಕ್ಕರ್ ಮೆಲ್ಕಾರ್, ಸಿದ್ದೀಕ್ ಗುಡ್ಡೆಅಂಗಡಿ, ರಫೀಕ್ ಭಾರತ್, ಮಸೂದ್ ಬೋಳಂಗಡಿ, ಹಫೀಝ್ ಗುಡ್ಡೆಅಂಗಡಿ, ಫಾರೂಕ್ ಭೂಯಾ, ಮುನ್ನ ಬೋಗೋಡಿ, ಸುಶೀಲಾ ಗುಡ್ಡೆಅಂಗಡಿ, ಅಕ್ಬರ್ ಬೋಗೋಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment