ಮಂಗಳೂರು : ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಪೊಲೀಸರಿಗೆ ಜಾಗೃತಿ ಕಾರ್ಯಾಗಾರ - Karavali Times ಮಂಗಳೂರು : ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಪೊಲೀಸರಿಗೆ ಜಾಗೃತಿ ಕಾರ್ಯಾಗಾರ - Karavali Times

728x90

30 August 2021

ಮಂಗಳೂರು : ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಪೊಲೀಸರಿಗೆ ಜಾಗೃತಿ ಕಾರ್ಯಾಗಾರ

ಮಂಗಳೂರು, ಆಗಸ್ಟ್ 30, 2021 (ಕರಾವಳಿ ಟೈಮ್ಸ್) : ಪಶ್ಚಿಮ ವಲಯ, ಪೂರ್ವ ವಲಯ, ಮಂಗಳೂರು ನಗರ ಕಮಿಷನರೇಟ್, ದಾವಣಗೆರೆ ವ್ಯಾಪ್ತಿಯ ಜಿಲ್ಲೆಗಳ 130 ಪೆÇಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಕುರಿತು 5 ದಿನಗಳ ಜಾಗೃತಿ ಕಾರ್ಯಕ್ರಮ ಮತ್ತು ತರಬೇತಿ ಕಾರ್ಯಾಗಾರಕ್ಕೆ ನಗರದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಕೇಂದ್ರ ಕಛೇರಿ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು. 

ಈ ಕಾರ್ಯಕ್ರಮದಲ್ಲಿ ಸೈಬರ್ ಕಾನೂನುಗಳು, ಸೈಬರ್ ಅಪರಾದ ಪ್ರಕರಣಗಳ ತನಿಖೆ, ಘಟನಾ ಸ್ಥಳದ ನಿರ್ವಹಣೆ, ಪರಿವೀಕ್ಷಣೆ, ದಾಖಲಾತಿ ಸಂಗ್ರಹಣೆ, ಇಂಟರ್‍ನೆಟ್ ಐಪಿ, ವೆಬ್‍ಸೈಟ್, ಇ-ಮೇಲ್‍ಗಳ ಕುರಿತ ತನಿಖೆ, ಸಂಪರ್ಕ ಸಾಧನಗಳಾದ ಮೊಬೈಲ್ ಫೋನ್, ಸ್ಯಾಟಲೈಟ್ ಫೋನ್, ಜಿಪಿಎಸ್ ಡಿವೈಸ್‍ಗಳ ಕುರಿತ ತನಿಖೆ,  ಸಾಮಾಜಿಕ ಜಾಲತಾಣಗಳ ಕುರಿತ ತನಿಖೆ, ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳ ಕುರಿತ ಮಾಹಿತಿ, ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ವಂಚನೆಗಳು, ಹೊರ ದೇಶದ ತನಿಖೆ, ಸೈಬರ್ ಅಪರಾಧ sತನಿಖೆಯಲ್ಲಿನ ಸವಾಲುಗಳು ಮೊದಲಾದ ವಿಷಯಗಳ ಕುರಿತಂತೆ ಮೆ| ಕಿಯೋನಿಕ್ಸ್ ಸಂಸ್ಥೆಯ ನುರಿತ ತಂತ್ರಜ್ಞರು ತರಬೇತಿ ನೀಡಲಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಪೊಲೀಸರಿಗೆ ಜಾಗೃತಿ ಕಾರ್ಯಾಗಾರ Rating: 5 Reviewed By: karavali Times
Scroll to Top