ಬಂಟ್ವಾಳ, ಸೆಪ್ಟಂಬರ್ 16, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಆಹಾರ ಇಲಾಖೆಯ ನಿರೀಕ್ಷಕ ರಾಜ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಸಂಜೆ ಬೇಧಿಸಿದ್ದು, ಆರೋಪಿ ಸಜಿಪನಡು ಗ್ರಾಮದ ಬಸ್ತಿಗುಡ್ಡೆ ನಿವಾಸಿ ಯೂಸುಫ್ ಅವರ ಪುತ್ರ ನೌಫಲ್ (26) ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅ
ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಗೂಡ್ಸ್ ಕ್ಯಾರಿಯರ್ ಲಘು ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಬಂಟ್ವಾಳ ಆಹಾರ ನಿರೀಕ್ಷಕರಿಗೆ ದೊರೆತ ಖಚಿತ ಮಾಹಿತಿಯಂತೆ ಗುರುವಾರ ಅಪರಾಹ್ನ 2.35ರ ವೇಳೆಗೆ ಬಾಳ್ತಿಲ ಗ್ರಾಮದ ಕೊಡಂಗೆಕೋಡಿಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ವೇಳೆ ಅಕ್ಕಿ ಸಾಗಾಟಕ್ಕೆ ಬಳಸಿದ ಟೆಂಪೋ, 50 ಕೆಜಿಯ 40 ಗೋಣಿಗಳಲ್ಲಿದ್ದ 2 ಟನ್ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಆಹಾರ ನಿರೀಕ್ಷರ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಎಫ್ಆರ್ ಸಂಖ್ಯೆ 109/2021 ಕಲಂ 3,7 ಎಷೆನ್ಶಿಯಲ್ ಕಮೋಡಿಟೀಸ್ ಆಕ್ಟ್ 1955 ರಂತೆ ಪ್ರಕರಣ ದಾಖಲಾಗಿದೆ.
ಇಲ್ಲಿ ಅಕ್ರಮ ಅಕ್ಕಿ ಸಾಗಾಟವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಾಗ ಈ ಅಕ್ರಮವನ್ನು ಪತ್ತೆಹಚ್ಚಿದ ಅಧಿಕಾರಿಗಳು 2 ಜನರನ್ನು ರಾತ್ರಿಸಮಯದಲ್ಲಿ ಬಿಟ್ಟು ಒಬ್ಬನ ಮೇಲೆ ಮಾತ್ರ ಪ್ರಕರಣ ದಾಖಲಿಸಿರುವುದರಿಂದ ಬ್ರಷ್ಟಾಚಾರದ ವಾಸನೆಯು ಸ್ಪಷ್ಟವಾಗಿ ಬಡಿಯುತ್ತಿದೆ.
ReplyDelete