ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ಸೆ. 20ರವರೆಗೆ ದಿನಾಂಕ‌ ವಿಸ್ತರಣೆ, ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮ ಪಾಲನೆ : ಸಚಿವ ಡಾ. ಅಶ್ವತ್ಥ ನಾರಾಯಣ  - Karavali Times ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ಸೆ. 20ರವರೆಗೆ ದಿನಾಂಕ‌ ವಿಸ್ತರಣೆ, ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮ ಪಾಲನೆ : ಸಚಿವ ಡಾ. ಅಶ್ವತ್ಥ ನಾರಾಯಣ  - Karavali Times

728x90

2 September 2021

ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ಸೆ. 20ರವರೆಗೆ ದಿನಾಂಕ‌ ವಿಸ್ತರಣೆ, ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮ ಪಾಲನೆ : ಸಚಿವ ಡಾ. ಅಶ್ವತ್ಥ ನಾರಾಯಣ 

 ಬೆಂಗಳೂರು, ಸೆಪ್ಟೆಂಬರ್ 03, 2021 (ಕರಾವಳಿ ಟೈಮ್ಸ್) : ಈ ಬಾರಿಯ ಶೈಕ್ಷಣಿಕ ವರ್ಷದ ಅಂದರೆ 2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ದಿನಾಂಕ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 20 ರವರೆಗೂ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ ಹೇಳಿದ್ದಾರೆ. 

 ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ರೀತಿಯಲ್ಲಿ ಈ ಬಾರಿ ದಾಖಲಾತಿ ನೀಡಲಾಗುತ್ತಿದ್ದು, ಈ ತಿಂಗಳ 20ರವರೆಗೆ ಪ್ರವೇಶಾವಕಾಶ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

 ರಾಜ್ಯದ 62 ಸರಕಾರಿ, 34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆ. 20ರ ಸಂಜೆ ಕಚೇರಿ ಅವಧಿವರೆಗೂ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು ಎಂದು ಸಚಿವರು ತಿಳಿಸಿದ್ದಾರೆ. 

 ಪ್ರವೇಶಾವಧಿಯನ್ನು ವಿಸ್ತರಣೆ ಮಾಡುವಂತೆ ಎಲ್ಲ ಪಾಲಿಟೆಕ್ನಿಕ್ʼಗಳ ಪ್ರಾಂಶುಪಾಲರ ಕೋರಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ಸೆ. 20ರವರೆಗೆ ದಿನಾಂಕ‌ ವಿಸ್ತರಣೆ, ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮ ಪಾಲನೆ : ಸಚಿವ ಡಾ. ಅಶ್ವತ್ಥ ನಾರಾಯಣ  Rating: 5 Reviewed By: karavali Times
Scroll to Top