ಕಡಬ, ಸೆಪ್ಟೆಂಬರ್ 02, 2021 (ಕರಾವಳಿ ಟೈಮ್ಸ್) : ಮಂಡ್ಯ ಜಿಲ್ಲೆಯ ಯುವ ವಾಗ್ಮಿಗಳ ಬಳಗ ವತಿಯಿಂದ ಭಗವದ್ಗೀತೆಯ ಸಾರವನ್ನು ಪಸರುವ ನಿಟ್ಟಿನಲ್ಲಿ “ಗೀತೆಯ ಮಹಿಮೆಯ ಅರಿಯೋಣ ಬಾರಾ” ಎಂಬ ಧ್ಯೇಯ ವಾಕ್ಯದಡಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಭಗವದ್ಗೀತಾ ಪಠಣ ಹಾಗೂ ಭಾವಾರ್ಥ ವಿವರಣ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಕಡಬ ತಾಲೂಕಿನ ಯುವ ಸಾಹಿತಿ ಸಮ್ಯಕ್ತ್ ಜೈನ್ ಅವರಿಗೆ ದ್ವಿತೀಯ ಸ್ಥಾನ ದೊರೆತಿದೆ.
ಇವರು ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ, ಕಾವ್ಯ ಜ್ಯೋತಿ ಪ್ರಶಸ್ತಿ, ಡಾ. ಕವಿತಾ ಕೃಷ್ಣ ಗೌರವಾರ್ಥ ಪ್ರಶಸ್ತಿ, ಉತ್ತಮ ಕಾರ್ಯನಿರ್ವಾಹಕ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರ-ಸನ್ಮಾನಗಳು ಈ ಹಿಂದೆ ದೊರೆತಿದ್ದು, ತಮ್ಮ ಕಿರಿ ವಯಸ್ಸಿನಲ್ಲೇ 3 ಕವನ ಸಂಕಲನಗಳನ್ನು ಬರೆದು-ಬಿಡುಗಡೆಗೊಳಿಸಿರುತ್ತಾರೆ.
ಇವರು ಪ್ರಸ್ತುತ ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದು, ಕಡಬ ತಾಲೂಕು, ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ನಿವಾಸಿ ಧರಣೇಂದ್ರ ಇಂದ್ರ-ಮಂಜುಳಾ ಅವರ ಪುತ್ರರಾದ್ದಾರೆ.
0 comments:
Post a Comment